ಮೂರನೇ ಲಸಿಕೆ ಪ್ರಯೋಗಕ್ಕೆ ಅನುಮತಿ
Team Udayavani, Apr 26, 2020, 5:05 AM IST
ಸಾಂದರ್ಭಿಕ ಚಿತ್ರ.
ಕೋವಿಡ್-19 ವೈರಸ್ ನಿಗ್ರಹಕ್ಕಾಗಿ ಎರಡನೇ ಹಂತದ 3ನೇ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಚೀನಾ ಅನುಮೋದನೆ ನೀಡಿದೆ. ಹೊಸದಾಗಿ ಚೀನಾದಲ್ಲಿ 12 ಕೋವಿಡ್-19ಪ್ರಕರಣಗಳು ಕಾಣಿಸಿಕೊಂಡಿದೆ, ಬೆನ್ನಲ್ಲೇ ಚೀನಾ 3ನೇ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ.
ಚೀನಾ ರಾಷ್ಟ್ರೀಯ ಫಾರ್ಮಾಸುÂಟಿಕಲ್ ಗ್ರೂಪ್ (ಸಿನೋಫಾರ್ಮ್) ನೆರವಿನಿ ನೊಂದಿಗೆ ವುಹಾನ್ ಇನ್ಸ್ಟಿಟ್ಯೂಟ್ ಆಫ್ ಬಯೋಲಾ ಜಿಕಲ್ ಪ್ರೊಡಕ್ಟ್ಸ್ ಹಾಗೂ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಅಭಿವೃದ್ದಿ ಪಡಿಸಿದ ಲಸಿಕೆಯ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ.
ಮೊದಲ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಮೂರು ವಿವಿಧ ವಯೋಮಿತಿಯ ಒಟ್ಟು 96 ಸೋಂಕಿತರಿಗೆ ಲಸಿಕೆ ನೀಡಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಕಂಡು ಬಂದಿದ್ದು ಎಲ್ಲರು ಆರಾಮವಾಗಿದ್ದಾರೆ. ಹೀಗಿದ್ದರೂ ಅವರ ಮೇಲೆ ಈಗಲೂ ನಿಗಾವಹಿಸಲಾಗಿದೆ ಎಂದು ಚೀನಾ ಹೇಳಿದೆ. ಎರಡನೇ ಹಂತದ ಲಸಿಕೆ ಪ್ರಯೋಗವೂ ಯಶಸ್ವಿಯಾಗಿತ್ತು.