ಪೇಟಿಎಂ, ಪೇಯು ಕಚೇರಿಗಳ ಮೇಲೆ ದಾಳಿ?
Team Udayavani, Sep 15, 2022, 7:45 AM IST
ನವದೆಹಲಿ: ಚೀನ ಲೋನ್ ಆ್ಯಪ್ ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಪೇಮೆಂಟ್ ಗೇಟ್ವೇಗಳಾದ ಪೇಟಿಎಂ ಮತ್ತು ಪೇಯು ಗೆ ಸೇರಿದ ವಿವಿಧ ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಕೆಲವು ಮಾಧ್ಯಮ ವರದಿಗಳ ಪ್ರಕಾರ ಮುಂಬೈ, ದೆಹಲಿ, ಗುರುಗ್ರಾಮ, ಲಕ್ನೋ ಮತ್ತು ಕೋಲ್ಕತ್ತಾದಲ್ಲಿರುವ ಕಚೇರಿಗಳ ಮೇಲೆ ನಡೆಸಲಾಗಿದೆ. ಆದರೆ ಈ ಕುರಿತು ಇಡಿ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ.
ಚೀನಾ ಲೋನ್ ಆ್ಯಪ್ ಗಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.3ರಂದು ಆನ್ಲೈನ್ ಪೇಮೆಂಟ್ ಗೇಟ್ವೇಗಳಾದ ರೇಜರ್ಪೇ ಪ್ರೈ. ಲಿ., ಕ್ಯಾಶ್ಪ್ರೀ ಪೇಮೆಂಟ್ಸ್ ಮತ್ತು ಪೇಟಿಎಂ ಪೇಮೆಂಟ್ ಸರ್ವೀಸಸ್ ಲಿ. ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು.
ಭಾರತದಲ್ಲಿ ಚೀನೀ ಪ್ರಜೆಗಳು ಅಕ್ರಮವಾಗಿ ಭಾರತೀಯ ನಿರ್ದೇಶಕರ ಹೆಸರಿನಲ್ಲಿ ಲೋನ್, ಬೆಟ್ಟಿಂಗ್, ಡೇಟಿಂಗ್ ಆ್ಯಪ್ ಕಂಪನಿ ತೆರೆಯುತ್ತಾರೆ. ಕೆಲವು ವರ್ಷಗಳ ನಂತರ ಚೀನೀ ಪ್ರಜೆಗಳು ಕಂಪನಿಯ ನಿರ್ದೇಶಕ ಸ್ಥಾನ ವಹಿಸುತ್ತಾರೆ. ನಂತರ ಕಂಪನಿ ಗಳಿಸಿದ ಆದಾಯವನ್ನು ಹಂತ-ಹಂತವಾಗಿ ಚೀನಾಗೆ ವರ್ಗಾಯಿಸುತ್ತಾರೆ ಎಂದು ಇತ್ತೀಚಿಗೆ ಇಡಿ ಅಧಿಕಾರಿಗಳು ಬಹಿರಂಗಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?