ಚುನಾವಣೆ ಬಳಿಕವೇ ಫೆಡರಲ್ ಫ್ರಂಟ್ ಸ್ಪಷ್ಟ ಚಿತ್ರಣ: ರಾಮ ರಾವ್
Team Udayavani, Mar 11, 2019, 12:21 PM IST
ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪ್ರತಿಪಾದಿಸಿರುವ ಬಿಜೆಪಿಯೇತರ, ಕಾಂಗ್ರೆಸೇತರ ಫೆಡರಲ್ ಫ್ರಂಟ್ ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಪಡೆಯಲಿದೆ ಎಂದು ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್ ಇಂದು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಚುನಾವಣೆಗಳನ್ನು ಒಂದೇ ದಿನ ಇಟ್ಟಿರುವ ಚುನಾವಣಾ ಆಯೋಗವನ್ನು ಅಭಿನಂದಿಸಿ, ಇದರಿಂದ ಎರಡೆರಡು ಕಡೆಗಳಲ್ಲಿ ಮತದಾನ ನಡೆಯುವುದು ತಪ್ಪುವಂತಾಗಿದೆ ಎಂದು ಹೇಳಿದರು.
ಫೆಡರಲ್ ಫ್ರಂಟ್ ವಿಚಾಯದಲ್ಲಿ ಮುಖ್ಯಮಂತ್ರಿ ಕೆಸಿಆರ್ ಅವರು ಐದು ಅಥವಾ ಆರು ರಾಜ್ಯಗಳಿಗೆ ಭೇಟಿ ನೀಡಿ ಅನೇಕ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ರಾವ್ ಹೇಳಿದರು.
”ನಮ್ಮ ಆಲೋಚನೆ, ಚಿಂತನೆಗಳನ್ನು ನಾವು ವಿವಿಧ ನಾಯಕರೊಂದಿಗೆ ವಿನಿಮಯಿಸಿಕೊಂಡಿದ್ದೇವೆ. ನಮ್ಮ ನಂಬಿಕೆ ಪ್ರಕಾರ ಎನ್‌ಡಿಎಗೆ 160 ರಿಂದ 170 ಸೀಟುಗಳು ಸಿಗಬಹುದು; ಬಿಜೆಪಿ 140 ರಿಂದ 150 ಸೀಟುಗಳಿಗೆ ಸೀಮಿತವಾಗಬಹುದು; ಇದರ ಎಲ್ಲ ಮಿತ್ರ ಪಕ್ಷಗಳಿಂದ 20 ಅಥವಾ 30 ಸೀಟುಗಳ ಕಾಣಿಕೆ ಸಿಗಬಹುದು; ಎಂದರೆ ಎನ್‌ಡಿಎ ಗೆ ಅಗತ್ಯವಿರುವ ಮ್ಯಾಜಿಕಲ್ ನಂಬರ್ 272 ಸೀಟುಗಳಿಗೆ ಕನಿಷ್ಠ ನೂರು ಸೀಟುಗಳ ಕೊರತೆ ಉಂಟಾಗಬಹುದು; ಈ ಹಿನ್ನೆಲೆಯಲ್ಲಿ ಫೆಡರಲ್ ಫ್ರಂಟ್ ರಚನೆಗೆ ಅವಕಾಶ ಲಭಿಸುತ್ತದೆ” ಎಂದು ರಾವ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ