ಕೊಯಮತ್ತೂರಿನ ಬೃಹತ್ ಶಿವನ ಮೂರ್ತಿ ಗಿನ್ನೆಸ್ ದಾಖಲೆಗೆ ಸೇರ್ಪಡೆ
Team Udayavani, May 14, 2017, 1:07 PM IST
ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್, ಕೊಯಮತ್ತೂರಿನಲ್ಲಿ ನಿರ್ಮಿಸಿರುವ ಭವ್ಯ 112 ಅಡಿ ಎತ್ತರದ ಶಿವನ ಮೂರ್ತಿ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ.
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಶಿವನ ಮೂರ್ತಿಯನ್ನು ವಿಶ್ವದ ಅತೀ ಎತ್ತರದ ಮೂರ್ತಿ ಎಂದು ಘೋಷಿಸಿದೆ. ಮೂರ್ತಿಯ ಸಿದ್ದತೆಗೆ 30 ತಿಂಗಳುಗಳ ಕಾಲ ವಿನ್ಯಾಸ ಮಾಡಲಾಗಿತ್ತು ಮತ್ತು ನಿರ್ಮಾಣಕ್ಕೆ 8 ತಿಂಗಳ ಕಾಲ ಕೆಲಸ ಮಾಡಲಾಗಿತ್ತು.
ಮೂರ್ತಿಯನ್ನು ಫೆಬ್ರವರಿ 24 ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.