ಕೊಲಂಬಿಯಾದಲ್ಲಿ ಭೂಕುಸಿತಕ್ಕೆ 200 ಸಾವು
Team Udayavani, Apr 3, 2017, 12:41 PM IST
ಮಕೋವಾ: ಭಾರತದ ಉತ್ತರಾಖಂಡದಲ್ಲಿ 2013ರಲ್ಲಿ ಮೇಘಸ್ಫೋಟ ಉಂಟಾಗಿ ಸಾವಿರಾರು ಮಂದಿ ಅಸುನೀಗಿದ್ದರು. ಅದೇ ಮಾದರಿಯಲ್ಲಿ ದಕ್ಷಿಣ ಅಮೆರಿಕದ ಕೊಲಂಬಿಯಾದ ಮಕೋವಾ ಎಂಬಲ್ಲಿ ಧಾರಾಕಾರ ಮಳೆ, ಪ್ರವಾಹ, ಭೂಕುಸಿತದಿಂದಾಗಿ ಬರೋಬ್ಬರಿ 200ಕ್ಕೂ ಅಧಿಕ ಮಂದಿ ಸಮಾಧಿಯಾಗಿದ್ದಾರೆ. ಅಷ್ಟೇ ಮಂದಿ ನಾಪತ್ತೆಯಾಗಿದ್ದಾರೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಂತಾ ರಾಷ್ಟ್ರೀಯ ರೆಡ್ ಕ್ರಾಸ್ ಸಂಘಟನೆ ತಿಳಿಸಿದೆ. ಈ ಘಟನೆಯ ಬಳಿಕ ಮಕೋವಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ದುರಂತ ನಡೆದ ಸ್ಥಳ ಈಕ್ವಡಾರ್ ಗಡಿಗೆ ಸಮೀಪದಲ್ಲಿದೆ.
ಧಾರಾಕಾರ ಮಳೆಯಿಂದಾಗಿ ನದಿಯಿಂದ ಉಕ್ಕಿ ಹರಿದ ನೀರು ಈಗ ಇಳಿದು ಹೋಗಿದ್ದು ರಸ್ತೆಯಲ್ಲಿ ಕೆಸರು ನಿಂತಿದೆ. ಜತೆಗೆ ಮನೆಗಳ ಮೇಲೆ, ವಾಣಿಜ್ಯ ಕಟ್ಟಡಗಳ ಮೇಲೆ ಬಂಡೆಕಲ್ಲುಗಳು ಕುಸಿದು ಬಿದ್ದಿವೆ. ಅಧ್ಯಕ್ಷ ಜಾನೋ ಮಾನ್ವಲ್ ಸಂಟೋಸ್ ರವಿವಾರ ಅಲ್ಲಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಪ್ರತಿಕೂಲ ಪರಿಸ್ಥಿತಿಯಿಂದಾಗಿ ತಮ್ಮ ಭೇಟಿ ರದ್ದುಪಡಿಸಿದ್ದಾರೆ. ಆದರೆ ದುರಂತದಲ್ಲಿ ಪಾರಾದವರನ್ನು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಕೂಡ ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ. ಹೀಗಾಗಿ ಸಾವಿನ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು