ದೌರ್ಜನ್ಯವನ್ನು ತಡೆಯಲು ಪುರುಷರಿಗೂ ಆಯೋಗ?
Team Udayavani, Sep 3, 2018, 1:23 PM IST
ನವದೆಹಲಿ: ಮಹಿಳೆಯರಿಂದ ಪುರುಷರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಲು ಪುರುಷರ ಆಯೋಗ ರಚಿಸಬೇಕೆಂದು ಉತ್ತರ ಪ್ರದೇಶದ ಇಬ್ಬರು ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ.
ಹರಿನಾರಾಯಣ್ ರಾಜ್‌ಭರ್ ಮತ್ತು ಅನುÏಲ್ ವರ್ಮಾ ಈ ಬೇಡಿಕೆ ಇಟ್ಟಿರುವ ಸಂಸದರು. ಪುರುಷ ಆಯೋಗ ರಚನೆ ಕುರಿತು ಸೆ.23ರಂದು ಬೆಂಬಲ ಯಾಚನೆ ಕಾರ್ಯಕ್ರಮ ನಡೆಸುವುದಾಗಿಯೂ ಅವರು ಹೇಳಿದ್ದಾರೆ. ಮಹಿಳೆಯರು ಅವರ ಪರ ಇರುವ ಕಾನೂನನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಕಾರಣ ಹಲವಾರು ಪುರುಷರು ಸಂತ್ರಸ್ತ ರಾಗಿದ್ದಾರೆ. ಈ ಕುರಿತ ಮೊಕದ್ದಮೆಗಳು ಇತ್ಯರ್ಥವಾಗ ಬೇಕೆಂದರೆ ಆಯೋಗದ ಅಗತ್ಯವಿದೆ ಎಂದಿದ್ದಾರೆ.