ಜಾತ್ಯತೀತ ಸಂಹಿತೆ ಜಾರಿ?


Team Udayavani, Sep 1, 2018, 6:00 AM IST

z-17.jpg

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ “ಏಕರೂಪ ನಾಗರಿಕ ಸಂಹಿತೆ’ಯ ಅಗತ್ಯವೇ ಇಲ್ಲ ಎಂದಿರುವ ಕಾನೂನು ಆಯೋಗ, ಇದಕ್ಕೆ ಬದಲಾಗಿ “ಪರೋಕ್ಷ’ವಾಗಿ ಜಾತ್ಯತೀತ ನಿಯಮ ಜಾರಿಗೆ ತಂದು ಎಲ್ಲರಿಗೂ ಸಮಾನ ನ್ಯಾಯ ಒದಗಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಸಮಾನ ನಾಗರಿಕ ಸಂಹಿತೆ ರಚನೆ ಸಂಬಂಧ ಸಾಧಕ -ಬಾಧಕಗಳ ಅಧ್ಯಯನಕ್ಕಾಗಿ ಕೇಂದ್ರ ಕಾನೂನು ಸಚಿವಾಲಯ ರೂಪಿಸಿದ್ದ 22ನೇ ಕಾನೂನು ಆಯೋಗದ ಅವಧಿ ಶುಕ್ರವಾರಕ್ಕೆ ಅಂತ್ಯವಾಗಿದ್ದು, ಇದುವರೆಗೆ ನಡೆಸಿರುವ ಅಧ್ಯಯನದ ಬಗ್ಗೆ ಪೂರ್ಣ ವರದಿ ನೀಡದೆ ಸಮಾ ಲೋಚನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಪ್ರಸಕ್ತ ಚಾಲ್ತಿಯಲ್ಲಿರುವ ಕೌಟುಂಬಿಕ ಕಾನೂನುಗಳಲ್ಲೇ ಕೆಲವು ಬದಲಾ ವಣೆ ಮಾಡಬಹುದು. ಸದ್ಯ ಏಕರೂಪ ನಾಗರಿಕ ಸಂಹಿತೆಯ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ; ಮದುವೆ, ವಿಚ್ಛೇದನ, ಜೀವನಾಂಶ ಮತ್ತು ವಿವಾಹದ ವಯಸ್ಸಿನ ಬಗ್ಗೆ ಕೆಲವೊಂದು ಅಭಿಪ್ರಾಯ ಮಂಡಿಸಿದೆ. 

ಜಾತ್ಯತೀತ ವ್ಯವಸ್ಥೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅತ್ಯಂತ ಪ್ರಮುಖವಾಗಿದ್ದು, ಸಾಮಾಜಿಕ ಪಿಡು ಗುಗಳನ್ನು ನಿವಾರಿಸಬೇಕಿದೆ ಎಂದಿದೆ. ದೇಶದ ವೈವಿಧ್ಯತೆಯ ಸಂಸ್ಕೃತಿಯನ್ನು ಗೌರವಿಸಬೇಕು. ಈ ಪ್ರಕ್ರಿಯೆಯಲ್ಲಿ ಕೆಲವು ಸಮುದಾಯ ಮತ್ತು ದುರ್ಬಲ ವರ್ಗಕ್ಕೆ ಅನ್ಯಾಯವಾಗಬಾರದು. ಹೀಗಾಗಿ ತಾರತಮ್ಯ ಇರುವಂಥ ಕಾನೂನುಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆಯೇ ಹೊರತು, ಈ ಸಂದರ್ಭದಲ್ಲೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಸಾಧುವಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ.

ವೈಯಕ್ತಿಕ ಮತ್ತು ಜಾತ್ಯತೀತ ಕಾನೂನುಗಳಾದ ಹಿಂದೂ ವಿವಾಹ ಕಾಯ್ದೆ-1955, ವಿಶೇಷ ವಿವಾಹ ಕಾಯ್ದೆ- 1954, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ-1936, ಮುಸ್ಲಿಂ ವಿವಾಹ ವಿಚ್ಛೇದನ ಕಾಯ್ದೆ-1939ಗಳಲ್ಲಿ ಕೊಂಚ ಬದಲಾವಣೆ ಜಾರಿಗೆ ತಂದು ಈ ತಾರತಮ್ಯ ನಿವಾರಿಸಬಹುದು ಎಂದು ಅದು ಹೇಳಿದೆ.

ಚರ್ಚ್‌ ತಪ್ಪೊಪ್ಪಿಗೆ ನಿಷೇಧ ಸಲ್ಲ
ಚರ್ಚ್‌ ತಪ್ಪೊಪ್ಪಿಗೆಯನ್ನು ನಿಷೇಧಿಸುವುದ ಕ್ಕಿಂತ ಆ ಪ್ರಕ್ರಿಯೆಗೆ ನನ್‌ಗಳನ್ನು ಸೇರ್ಪಡೆಗೊ ಳಿಸುವುದು ಸೂಕ್ತ ಎಂದು ಕಾನೂನು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರ ಕುರಿತು ಎಚ್ಚರಿಕೆ ಅಗತ್ಯ. ತಪ್ಪೊಪ್ಪಿಗೆ ಪ್ರಕ್ರಿಯೆಗೆ ನನ್‌ಗಳ ಸೇರ್ಪಡೆಗೆ ಕಾನೂನಿನ ಹೇರಿಕೆ ಅಗತ್ಯವಿಲ್ಲ, ಸಮುದಾಯದೊಳಗೆ ಒಮ್ಮತ ಮೂಡಿಸಿ ಜಾರಿಗೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

21ನೇ ಆಯೋಗ ಅವಧಿ ಮುಕ್ತಾಯ
ಸಮಾನ ನಾಗರಿಕ ಸಂಹಿತೆಯ ಕುರಿತು ಸಮಗ್ರ ವರದಿ ಸಲ್ಲಿಸುವ ಹೊಣೆಯನ್ನು 21ನೇ ಕಾನೂನು ಆಯೋಗ ಮುಂದಿನ ಆಯೋಗಕ್ಕೆ ವರ್ಗಾಯಿಸಿದೆ. ನ್ಯಾ| ಬಿ.ಎಸ್‌.ಚೌಹಾಣ್‌ ನೇತೃತ್ವದ 21ನೇ ಆಯೋಗದ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡಿದ್ದು ಅಂತಿಮ ವರದಿಯ ಬದಲು ಸಮಾಲೋಚನ ಪ್ರಬಂಧ ಪ್ರಕಟಿಸಿದೆ.

ಮಹಿಳೆಗೂ ಸಮಾನ ಪಾಲು
ಹಣಕಾಸು ಕೊಡುಗೆಯನ್ನು ಲೆಕ್ಕಿಸದೆ ಕುಟುಂಬದಲ್ಲಿ ಮಹಿಳೆಯ ಪಾತ್ರವನ್ನು ಗುರುತಿ ಸಬೇಕಿದೆ. ವಿಚ್ಛೇದನ ವೇಳೆ ಮದುವೆಯ ಅನಂತರ ಗಳಿಸಿದ ಆಸ್ತಿಯಲ್ಲಿ ಆಕೆಗೆ ಸಮಾನ ವಾದ ಪಾಲು ಸಲ್ಲಬೇಕು ಎಂದು ಕಾನೂನು ಆಯೋಗ ಸಲಹೆ ನೀಡಿದೆ. ಈ ತತ್ವವನ್ನು ಸಂಬಂಧ ಮುರಿಯುವ ವೇಳೆ ಆಸ್ತಿಯನ್ನು ಸಮಾನವಾಗಿ ವಿಭಜಿಸಬೇಕೆಂಬುದಾಗಿ ಯಥಾವತ್‌ ಆಗಿ ಅರ್ಥೈಸಿಕೊಳ್ಳಬಾರದು. ಕೆಲವು ಪ್ರಕರಣಗಳಲ್ಲಿ ಪುರುಷರಿಗೆ ಹೊರೆಯಾಗುವುದೂ ಇದೆ. ಆದ್ದರಿಂದ ಎಚ್ಚರಿಕೆ ಅಗತ್ಯ. ಇದನ್ನು ಕೋರ್ಟ್‌ ವಿವೇಚನೆಗೆ ಬಿಡುವುದು ಮುಖ್ಯ ಎಂದೂ ಆಯೋಗ ಹೇಳಿದೆ.

ಪುರುಷರಿಗೂ ಮದುವೆ ವಯಸ್ಸು 18 ಮಾಡಿ
ಮದುವೆಯ ಕಾನೂನಾತ್ಮಕ ವಯಸ್ಸಿನಲ್ಲಿ ಸಮಾನತೆ ತರಬೇಕೆಂದು ಆಶಿಸಿರುವ ಕಾನೂನು ಆಯೋಗ, ಪುರುಷರ ಮದುವೆಯ ವಯಸ್ಸನ್ನು 21ರಿಂದ 18ಕ್ಕೆ ಇಳಿಸಬೇಕು ಎಂದು ಶಿಫಾರಸು ಮಾಡಿದೆ. ಪ್ರೌಢತೆಗೆ ಸಾರ್ವತ್ರಿಕವಾಗಿ ನಿಗದಿಯಾಗಿ ರುವ ಹಾಗೂ ಸರಕಾರದ ಎಲ್ಲ ಸವಲತ್ತು ಗಳನ್ನು ಪಡೆಯಲು ನಾಗರಿಕರಿಗೆ 18 ವಯಸ್ಸನ್ನು ನಿಗದಿಪಡಿಸಿರುವಾಗ ಸಂಗಾತಿ ಆಯ್ದುಕೊಳ್ಳುವ ಸಾಮರ್ಥ್ಯ ಅವರಿಗಿದೆ ಎಂದು ಪರಿಗಣಿಸಬೇಕು ಎಂದು ಹೇಳಿದೆ.

ಬಹುಪತ್ನಿತ್ವಕ್ಕಾಗಿ ಮತಾಂತರ ಅಪಾಯ
ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ ಅದು ಅಪರೂಪದ ಅಭ್ಯಾಸವಾಗಿದೆ. ಆದರೆ ನಿಜವಾದ ಅಪಾಯ, ಬಹು ಪತ್ನಿಯರನ್ನು ಹೊಂದುವ ಸಲುವಾಗಿ ಇತರರನ್ನು ಇಸ್ಲಾಂಗೆ ಪರಿವರ್ತಿಸುವುದಾಗಿದೆ. ಇದು ಅಪಾಯಕಾರಿ ಬೆಳವಣಿಗೆ 2ಎಂದು ಆಯೋಗ ಬೆಟ್ಟು ಮಾಡಿದೆ. 

ಟಾಪ್ ನ್ಯೂಸ್

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಪ್ರಗತಿಗೆ ವಸಾಹತುಶಾಹಿ ಅಡ್ಡಿ: ಪ್ರಧಾನಿ ಮೋದಿ

ಪ್ರಗತಿಗೆ ವಸಾಹತುಶಾಹಿ ಅಡ್ಡಿ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಪ್ರಗತಿಗೆ ವಸಾಹತುಶಾಹಿ ಅಡ್ಡಿ: ಪ್ರಧಾನಿ ಮೋದಿ

ಪ್ರಗತಿಗೆ ವಸಾಹತುಶಾಹಿ ಅಡ್ಡಿ: ಪ್ರಧಾನಿ ಮೋದಿ

ಖಾಸಗಿ ಕ್ರಯೋಜನಿಕ್‌ ಪ್ರಯೋಗ ಯಶಸ್ವಿ

ಖಾಸಗಿ ಕ್ರಯೋಜನಿಕ್‌ ಪ್ರಯೋಗ ಯಶಸ್ವಿ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

ಮಾದಕ ಚಟ ನಿರ್ಮೂಲನೆಗೆ ಹೊಸ ಕಾರ್ಯಕ್ರಮ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.