ಸೇನಾ ವ್ಯವಹಾರಗಳ ಪರಾಮರ್ಶೆಗೆ ಸಮಿತಿ

Team Udayavani, Aug 18, 2019, 5:45 AM IST

ಹೊಸದಿಲ್ಲಿ: ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಖರೀದಿ ವ್ಯವಹಾರಗಳ (ಡಿಪಿಪಿ) ಪರಾಮರ್ಶೆಗಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸುವ ಪ್ರಸ್ತಾವನೆಗೆ ರಕ್ಷಣಾ ಖಾತೆ ಸಚಿವ ರಾಜನಾಥ್‌ ಸಿಂಗ್‌ ಒಪ್ಪಿಗೆ ಸೂಚಿಸಿದ್ದಾರೆ. ಶಸ್ತ್ರಾಸ್ತ್ರ ಪೂರೈಕೆಗಳಲ್ಲಿ ಆಗುವ ವಿಳಂಬ ತಪ್ಪಿಸಿ, ಪ್ರಧಾನಿ ಮೋದಿ ಆಶಯದ “ಮೇಕ್‌ ಇನ್‌ ಇಂಡಿಯಾ’ ಅಡಿ ಸೇನೆಯನ್ನು ಶಕ್ತಿಶಾಲಿಗೊಳಿಸುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ.

ಈ ಸಮಿತಿಗೆ ಮಹಾ ನಿರ್ದೇಶಕರೊಬ್ಬರ (ಡಿಜಿ) ಅಧ್ಯಕ್ಷತೆ ಇರಲಿದ್ದು, ಅವರ ಅಧೀನದಲ್ಲಿ ಜಂಟಿ ಕಾರ್ಯದರ್ಶಿ ಅಥವಾ ಸೇನೆಯ ಮೇಜರ್‌ ಜನರಲ್‌ ಹುದ್ದೆಗಳಿಗೆ ಸರಿಸಮಾನವೆನಿಸುವ 11 ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.
ಅದಲ್ಲದೆ, ಡಿಪಿಪಿಗಳ ಪರಾಮರ್ಶೆ ಮಾತ್ರ ವಲ್ಲದೆ, ಸೇನೆಯ ಪುನಶ್ಚೇತನಕ್ಕೆ ಹೊಸ ಪರಿ ಕಲ್ಪನೆಗಳ ಪರಾಮರ್ಶೆ ಮತ್ತು ಅನುಷ್ಠಾನ, ಸಾಮಾನು- ಸರಂಜಾಮು ಸಾಗಣೆಯ ಮೇಲು ಸ್ತುವಾರಿ, ಸೇನೆಯೊಳಗಿನ ಸುವ್ಯವಸ್ಥೆ ಹಾಗೂ ಸುರಕ್ಷತೆಯ ವಾತಾವರಣ, ಸೇನೆಯ ಸ್ಥಿರಾಸ್ತಿ ವ್ಯವಹಾರಗಳ ಮೇಲುಸ್ತುವಾರಿ, ಸೇನೆಯ ಗುಣಮಟ್ಟ ಹೆಚ್ಚಳ, ಹೊಸ ಸಾರ್ಟಪ್‌ಗ್ ಳನ್ನು ಸೇನೆಯ ಅವಶ್ಯಕ ಪರಿಕರ, ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರೇರೇಪಿಸುವ ಜವಾಬ್ದಾರಿಯನ್ನು ಹೊಂದಿದೆ.

2009 ಹಾಗೂ 2016ರಲ್ಲಿ ಅನು ಷ್ಠಾನಕ್ಕೆ ಬಂದಿದ್ದ ಡಿಪಿಪಿಗಳ ಪುನರ್‌ ಪರಿಶೀಲನೆ ಕೆಲಸ, ಹೊಸ ಸಮಿತಿಯ ಮೊದಲ ಕೆಲಸವಾಗಲಿದೆ.

ಒಎಫ್ಬಿ ಖಾಸಗೀಕರಣ ಇಲ್ಲ: ಕೇಂದ್ರ
ಭಾರತೀಯ ಸೇನೆಗೆ ಶಸ್ತ್ರಾಸ್ತ್ರವನ್ನು ತಯಾರಿಸಿ ಪೂರೈಸುವ, ಆರ್ಡಿನನ್ಸ್‌ ಫ್ಯಾಕ್ಟರಿ ಬೋರ್ಡ್‌ (ಒಎಫ್ಬಿ) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಖಾಸಗೀಕರಣವು ಕೇವಲ ವದಂತಿಯಷ್ಟೇ ಎಂದಿರುವ ಇಲಾಖೆ, ಒಎಫ್ಬಿಯ ಕಾರ್ಯಕ್ಷಮತೆ ಹೆಚ್ಚಿಸಲು ರಕ್ಷಣಾ ಇಲಾಖೆಯ ಅಧಿಕಾರಿಗಳು, ಒಎಫ್ಬಿ ಕಾರ್ಮಿಕ ಸಂಘಟನೆಗಳ ಮುಖಂಡರ ನಡುವೆ ನಿರಂತರ ಮಾತುಕತೆ ಸಾಗಿದೆ.

ಸಕಾರಾತ್ಮಕ ಹೆಜ್ಜೆಗಳಿಂದ ಒಎಫ್ಬಿಯನ್ನು ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಒಎಫ್ಬಿಯಲ್ಲಿ ಪ್ರಸ್ತುತ 1 ಲಕ್ಷಕ್ಕೂ ಅಧಿಕ ಸಿಬ್ಬಂದಿಯಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ