ಈ ವರ್ಷವೂ ಸಿಇಟಿ ಅನುಮಾನ
Team Udayavani, Jan 21, 2022, 6:50 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ತೆರವಾದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸಬೇಕಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ಈ ವರ್ಷವೂ ನಡೆಯುವುದು ಅನುಮಾನ.
ಇದಕ್ಕೆ ಕಾರಣ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು. ಕೇಂದ್ರ ಸರಕಾರಗಳಲ್ಲಿರುವ ಗ್ರೂಪ್ -ಬಿ (ನಾನ್-ಗೆಜೆಟೆಡ್), ಗ್ರೂಪ್-ಸಿ (ನಾನ್-ಟೆಕ್ನಿಕಲ್), ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿರುವ ತೆರವಾದ ಹುದ್ದೆಗಳಿಗೆ ಮಾರ್ಚ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿತ್ತು.
ಕೇಂದ್ರ ಸರಕಾರದ ಸಿಬಂದಿ ಮತ್ತು ತರಬೇತಿ ಸಚಿವಾಲಯದ ಹಿರಿಯ ಅಧಿಕಾರಿ “ನ್ಯೂಸ್18′ ಜತೆಗೆ ಮಾತನಾಡಿ, “ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುವುದು ಅನುಮಾನ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.