ಲೋಕಸಭಾ ಚುನಾವಣೆ: ಆಪ್‌ ಜತೆ ಮೈತ್ರಿಗೆ ಮುಂದಾಗದ ಕಾಂಗ್ರೆಸ್‌

Team Udayavani, Feb 14, 2019, 1:41 PM IST

ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ  ಆಮ್‌ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಹುತೇಕ ಇಲ್ಲ ವೇ ಇಲ್ಲವಾಗಿದೆ ಎಂದು ಆಪ್‌ ಮುಖ್ಯಸ್ಥ  ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. 

ನಿನೆ ದಿಲ್ಲಿಯ  ಜಂತರ್‌ ಮಂತರ್‌ನಲ್ಲಿ ನಡೆದಿದ್ದ ವಿಪಕ್ಷಗಳ ಸಮಾವೇಶದಲ್ಲಿ ಕೇಜ್ರಿವಾಲ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಆದರೂ ದಿಲ್ಲಿಯಲ್ಲಿ ಆಪ್‌ ಜತೆ ಮೈತ್ರಿಗೆ ಕಾಂಗ್ರೆಸ್‌ ಮುಂದಾಗಿಲ್ಲದಿರುವುದು ಗಮನಾರ್ಹವಾಗಿದೆ. 

ದಿಲ್ಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಲ್ಲಿ ಅದರ ಲಾಭ ಬಿಜೆಪಿಗೆ ಸಿಗಲಿದೆ ಎಂದು ಕೇಜ್ರಿವಾಲ್‌ ಹೇಳಿದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ