ಸಲ್ಲು ಮೊರೆ ಹೋದ ಕಾಂಗ್ರೆಸ್‌

Team Udayavani, Mar 20, 2019, 12:30 AM IST

ಭೋಪಾಲ್‌: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂದೋರ್‌ನ ತನ್ನ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಆಗಮಿಸುವಂತೆ ಕಾಂಗ್ರೆಸ್‌, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಕೋರಿದೆ. ಸಲ್ಮಾನ್‌  ಅವರು ಇಂದೋರ್‌ನಲ್ಲಿ 1965ರಲ್ಲಿ ಜನಿಸಿದ್ದರು. ತಮ್ಮ ಬಾಲ್ಯದ ಆರಂಭಿಕ ದಿನಗಳನ್ನು ಅಲ್ಲೇ ಕಳೆದಿದ್ದ ಅವರು, ಆನಂತರ ಮುಂಬೈಗೆ ತೆರಳಿದ್ದರು. ಹಾಗಾಗಿ, ಸಲ್ಮಾನ್‌ ಅವರನ್ನು ಪ್ರಚಾರಕ್ಕೆ ಕರೆ ತರುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿ ಇಂದೋರ್‌ ಕ್ಷೇತ್ರವನ್ನು ಬಿಜೆಪಿ ಹಿಡಿತದಿಂದ ವಶಕ್ಕೆ ಪಡೆಯುವ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ