ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್!

ಕಾಂಗ್ರೆಸ್ ಪಕ್ಷ ಪೈಲಟ್ ಹಾಗೂ ಆಪ್ತರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅಸ್ತ್ರ ಉಪಯೋಗಿಸಿದೆ

Team Udayavani, Jul 15, 2020, 4:58 PM IST

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್

ನವದೆಹಲಿ/ಜೈಪುರ್: ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಆಪ್ತರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕ್ರಮ ಕೈಗೊಂಡಿದೆ. ಅಂದರೆ ಪೈಲಟ್ ಅವರನ್ನು ಕೆಲವು ಹುದ್ದೆಯಿಂದ ವಜಾಗೊಳಿಸಿದೆ ವಿನಃ ಪಕ್ಷದಿಂದ ಉಚ್ಛಾಟಿಸಿಲ್ಲ ಎಂಬುದು ಗಮನಾರ್ಹ. ಯಾಕೆಂದರೆ ಇದರ ಹಿಂದೆ ಗೆಹ್ಲೋಟ್ ಮತ್ತು ಕಾಂಗ್ರೆಸ್ ಲೆಕ್ಕಾಚಾರವಿದೆ!

ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಹುತೇಕ 100 ಶಾಸಕರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ. 200 ಮಂದಿ ಶಾಸಕ ಬಲದ ರಾಜಸ್ಥಾನ್ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಶಾಸಕರ ಬೆಂಬಲದ ಅಗತ್ಯವಿದೆ. ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಪೈಲಟ್ ಅವರ ಇಬ್ಬರು ಆಪ್ತ ಸಚಿವರನ್ನು ಕೂಡಾ ಸಂಪುಟದಿಂದ ಕೈಬಿಡಲಾಗಿದೆ. ಆದರೂ ಕಾಂಗ್ರೆಸ್ ಪಕ್ಷ ಪೈಲಟ್ ಹಾಗೂ ಅವರ ಬೆಂಬಲಿಗ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ ಎಂಬುದು ಮುಖ್ಯವಾದ ಅಂಶವಾಗಿದೆ.

ಇದನ್ನೂ ಓದಿ:ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ

ಪೈಲಟ್ ಅವರ ಹೇಳಿಕೆ ಪ್ರಕಾರ ತನಗೆ 19 ಶಾಸಕರ(ಪೈಲಟ್ ಹಾಗೂ 3 ಪಕ್ಷೇತರ ಶಾಸಕರು ಸೇರಿ) ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ. ಒಂದು ವೇಳೆ 19 ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿದರೆ, ಸಂಸತ್ ಕಾಯ್ದೆ ಅನ್ವಯ ಅವರೆಲ್ಲರೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಅರ್ಹರು, ಅಷ್ಟೇ ಅಲ್ಲ ಬಿಜೆಪಿ ಪಕ್ಷ ಸೇರ್ಪಡೆಗೊಂಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಚಲಾಯಿಸಬಹುದು!ಒಂದು ವೇಳೆ ವಿಶ್ವಾಸಮತ ಯಾಚನೆಗೂ ಮೊದಲು ಪಕ್ಷದಿಂದ ಇವರನ್ನೆಲ್ಲಾ ಉಚ್ಛಾಟಿಸಿದರೆ ಗೆಹ್ಲೋಟ್ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ಯಾಕೆಂದರೆ 200 ಸದಸ್ಯ ಬಲದ ರಾಜಸ್ಥಾನ್ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಶಾಸಕರ ಬೆಂಬಲದ ಅಗತ್ಯವಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 100 ಸ್ಥಾನಗಳಲ್ಲಿ ಜಯಗಳಿಸಿತ್ತು. ನಂತರ ನಡೆದ ಉಪ(ರಾಮಗಢ್)ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ 101 ಸ್ಥಾನ ಪಡೆದು ಬಹುಮತ ಗಳಿಸಿತ್ತು. ಜತೆಗೆ ಬಿಎಸ್ಪಿಯ ಆರು ಶಾಸಕರ ಬೆಂಬಲದೊಂದಿಗೆ ಗೆಹ್ಲೋಟ್ ಸರ್ಕಾರ 107 ಸಂಖ್ಯಾಬಲ ಹೊಂದಿತ್ತು. ಒಂದು ವೇಳೆ 17 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಕಾಯ್ದೆಯನ್ವಯ ಪಕ್ಷದಿಂದ ಅನರ್ಹಗೊಳಿಸಿದಾಗ, ಬಹುಮತದ ಬಲ 92ಕ್ಕೆ ಕುಸಿಯಲಿದೆ. ಅಂದರೆ 200 ಸದಸ್ಯ ಬಲದಲ್ಲಿ 17 ಶಾಸಕರನ್ನು ಅನರ್ಹಗೊಳಿಸಿದಾಗ ಸದನದ ಬಲ 183ಕ್ಕೆ ಇಳಿಕೆಯಾಗಲಿದೆ. ಆಗ ಬಹುಮತಕ್ಕೆ 92 ಸ್ಧಾನಗಳು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕನಿಷ್ಠ 90 ಶಾಸಕರ ಬೆಂಬಲದ ನಿರೀಕ್ಷೆಯಲ್ಲಿದೆ. ಅಲ್ಲದೇ ಗೆಹ್ಲೋಟ್ ಸರ್ಕಾರ ವಿಶ್ವಾಸಮತ ಗೆಲ್ಲಲು ಇಬ್ಬರು ಸಿಪಿಎಂ ಶಾಸಕರ ಬೆಂಬಲ ಕೂಡಾ ಅನಿವಾರ್ಯವಾಗಲಿದೆ.

ಇದನ್ನೂ ಓದಿ:ಏನಿದು ರಾಜಸ್ಥಾನ್ ಬಿಕ್ಕಟ್ಟು: ಮೂರು ಬೇಡಿಕೆ ಈಡೇರಿಸುವಂತೆ ಸಚಿನ್ ಪೈಲಟ್ ಪಟ್ಟು!

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹತ್ತು ಮಂದಿ ಪಕ್ಷೇತರ ಶಾಸಕರು ಅಥವಾ ಇಬ್ಬರು ಭಾರತೀಯ ಟ್ರೈಬಲ್ ಪಕ್ಷದ ಶಾಸಕರ ಬೆಂಬಲದ ಅಗತ್ಯ ಇರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಪೈಲಟ್ ಹಾಗೂ ಆಪ್ತರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅಸ್ತ್ರ ಉಪಯೋಗಿಸಿ, ಚರ್ಚೆಗೆ ಬಾಗಿಲು ಸದಾ ತೆರೆದಿದೆ ಎಂಬ ಸಂದೇಶವನ್ನು ರವಾನಿಸಿದೆ.

ಈ ಬಗ್ಗೆ ಸ್ಪೀಕರ್ ಅವರು ಪಕ್ಷ ವಿರೋಧಿ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸಬೇಕಾಗುತ್ತದೆ. ಶಾಸಕಾಂಗ ಪಕ್ಷದ ಕಾಯ್ದೆ ಪ್ರಕಾರ, ಶಾಸಕರ ವಿರುದ್ಧ ಅನರ್ಹ ಪ್ರಕ್ರಿಯೆ ಆರಂಭಿಸುವಂತೆ ಸ್ಪೀಕರ್ ಗೆ ದೂರು ನೀಡಬೇಕಾಗುತ್ತದೆ. ನಂತರ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಉತ್ತರಪಡೆಯಬೇಕಾಗುತ್ತದೆ. ನಂತರ ಸ್ಪೀಕರ್ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಅವಕಾಶದಿಂದಾಗಿ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಅಲ್ಪಪ್ರಮಾಣದ ಬಹುಮತದ ವಿಶ್ವಾಸ ಹೊಂದುವಂತೆ ಮಾಡಿದೆ.

ಕಾಂಗ್ರೆಸ್ ಪಕ್ಷಕ್ಕೆ 107 ಶಾಸಕರ ಬೆಂಬಲ ಇರುವುದಾಗಿ ತಿಳಿಸಿದೆ. ಮಂಗಳವಾರ ಕರೆದ ಶಾಸಕಾಂಗ ಪಕ್ಷದ ಸಭೆಗೆ 106 ಶಾಸಕರು ಹಾಜರಾಗಿದ್ದರು. ತಡರಾತ್ರಿಯ ಬೆಳವಣಿಗೆಯಲ್ಲಿ, ಗೆಹ್ಲೋಟ್ ಸರ್ಕಾರವಾಗಲಿ ಅಥವಾ ಬಿಜೆಪಿಯನ್ನಾಗಲಿ ಬೆಂಬಲಿಸುವುದಿಲ್ಲ ಎಂದು ಭಾರತೀಯ ಟ್ರೈಬಲ್ ಪಕ್ಷ ತಿಳಿಸಿದೆ.

ಇದನ್ನೂ ಓದಿ:ಪೈಲಟ್ ಗೆ ಮತ್ತೊಂದು ಕಂಟಕ: 18 ಮಂದಿ ಬಂಡಾಯ ಶಾಸಕರು, ಪೈಲಟ್ ಗೆ ಸ್ಪೀಕರ್ ನೋಟಿಸ್!

ಕೋರ್ಟ್ ಕಟಕಟೆ ಏರಿದರೆ ಏನಾಗಲಿದೆ?
ಒಂದು ವೇಳೆ ಸ್ಪೀಕರ್ ನೋಟಿಸ್ ಅನ್ನು ಬಂಡಾಯ ಶಾಸಕರು ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದೋ ಸ್ಪೀಕರ್ ವಿಚಾರಣೆ ಮೊದಲು ಅಥವಾ ನಂತರ. ಅದು ಬಳಿಕ ಮತ್ತೊಂದು ಕಾನೂನು ಹೋರಾಟದ ತಿರುವು ಪಡೆದುಕೊಳ್ಳಲಿದೆ (ಈಗಾಗಲೇ ಕರ್ನಾಟಕ ರಾಜಕೀಯ ಪ್ರಕರಣದಲ್ಲಿ ಗಮನಿಸಲಾಗಿದೆ). ಒಂದು ವೇಳೆ ಶಾಸಕರ ಅನರ್ಹತೆ ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಿದರೆ, ಆಗ ಸದನದಲ್ಲಿ ಸಂಖ್ಯಾಬಲವೇ ಮುಖ್ಯವಾಗಲಿದೆ. ಆಗ ಗೆಹ್ಲೋಟ್ ಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಈ ವೇಳೆ ಕಾಂಗ್ರೆಸ್ ಬಂಡಾಯ ಶಾಸಕರು ಬಿಜೆಪಿ ಜತೆ ಹೋಗಬಹುದು. ಇದರಿಂದ ಸದನದಲ್ಲಿ ಬಿಜೆಪಿ ಬಲ (72+19+ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ 03) 94ಕ್ಕೆ ಏರಿಕೆಯಾಗಲಿದೆ. ಗೆಹ್ಲೋಟ್ ಗೆ 88 ಶಾಸಕರ ಬೆಂಬಲ ಇರಲಿದ್ದು, ಆಗ ಗೆಲುವು ಸಾಧಿಸಲು 13 ಪಕ್ಷೇತರ ಹಾಗೂ ಇತರ ಸಣ್ಣ ಪಕ್ಷಗಳ ಶಾಸಕರ ಬೆಂಬಲದ ಅಗತ್ಯವಾಗಲಿದೆ.

(ಮಾಹಿತಿ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್, ಎನ್ ಡಿ ಟಿವಿ ಹಾಗೂ ಇತರ ಮೂಲಗಳಿಂದ)

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.