ಕೊನೆಗೂ ರಾಜಸ್ಥಾನ ಸಂಪುಟ ವಿಸ್ತರಣೆಗೆ ಕೈ ವರಿಷ್ಠರ ಸಮ್ಮತಿ?
Team Udayavani, Nov 12, 2021, 5:26 AM IST
ಹೊಸದಿಲ್ಲಿ: ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ರಾಜಸ್ಥಾನದಲ್ಲಿ ಬರದಂತೆ ಮಾಡಲು ಹೊಸದಿಲ್ಲಿಯಲ್ಲಿ ಬಿರುಸಿನ ಸಮಾಲೋಚನೆಗಳು ನಡೆದಿವೆ.
ಸಿಎಂ ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ಶಾಸಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ.
ಸಿಎಂ ಗೆಹ್ಲೋಟ್ , ಶಾಸಕ ಸಚಿನ್ ಪೈಲಟ್ ಪ್ರತ್ಯೇಕವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾಗಿರುವ ಪ್ರಿಯಾಂಕಾ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದರು. ಅನಂತರ ಮಾತನಾಡಿದ ಸಿಎಂ ಗೆಹ್ಲೋಟ್ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.
ಇದನ್ನೂ ಓದಿ:ನಕಲಿ ಫೇಸ್‌ಬುಕ್ ಜಾಲ: ಮಂಗಳೂರಿನ ವ್ಯಕ್ತಿ ಸೌದಿಯಲ್ಲಿ ಬಂದಿ
ಬುಧವಾರ ಮತ್ತು ಗುರುವಾರ ಎರಡೂ ದಿನಗಳ ಕಾಲ ನಡೆದ ಬಿರುಸಿನ ಮಾತುಕತೆ ವೇಳೆ ಸಚಿವ ಸಂಪುಟವನ್ನು ಏಕೆ ವಿಸ್ತರಿಸಲಿಲ್ಲ ಎಂದು ಹಿರಿಯ ಮುಖಂಡರು ಗೆಹ್ಲೋಟ್ ರನ್ನು ಪ್ರಶ್ನಿಸಿದ್ದಾರೆ. ಗುರುವಾರ ಶಾಸಕ ಸಚಿನ್ ಪೈಲಟ್ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್‌ರನ್ನು ಭೇಟಿಯಾಗಿ ಜೈಪುರಕ್ಕೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!
ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ
ಭಾರತವು ಠಾಕ್ರೆ- ಮೋದಿಗೆ ಸೇರಿದ್ದಲ್ಲ, ಭಾರತವು..: ಅಸಾದುದ್ದೀನ್ ಓವೈಸಿ
ಮೋದಿ ಸರ್ಕಾರಕ್ಕೆ 8 ವರ್ಷ: ನಾಳೆಯಿಂದ ಬಿಜೆಪಿ ಜನಸಂಪರ್ಕ ಕಾರ್ಯಕ್ರಮ
ಆಗ ಡೆಲಿವರಿ ಬಾಯ್, ಈಗ ಸಾಫ್ಟ್ ವೇರ್ ಎಂಜಿನಿಯರ್!ಯುವ ಉದ್ಯೋಗಿಗಳಿಗೆ ಸ್ಫೂರ್ತಿಯಾದ ಹುಡುಗ