ಅಮಿತ್‌ ಶಾ ತಂತ್ರಕ್ಕೆ ‘ಕೈ’ ಸೆಡ್ಡು: ಗೆದ್ದ ಅಹಮ್ಮದ್‌ ಪಟೇಲ್‌

Team Udayavani, Aug 9, 2017, 2:04 AM IST

Ahmed-Patel-600.jpg

ಅಹಮದಾಬಾದ್‌: ಭಾರೀ ಕುತೂಹಲ ಮೂಡಿಸಿದ್ದ ಮತ್ತು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ರಾಜ್ಯಸಭಾ ಸ್ಥಾನಗಳಿಗೆ ಗುಜರಾತ್‌ ರಾಜ್ಯದಿಂದ 3 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ ಅಮಿತ್‌ ಶಾ ಹಾಗೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಅಹಮ್ಮದ್‌ ಪಟೇಲ್‌ ಅವರ ವಿರುದ್ಧ ಬಿಜೆಪಿಯಿಂದ ತೃತೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರ ರಾಜ್ಯಸಭಾ ಪ್ರವೇಶಕ್ಕೆ ತಡೆ ಹಾಕುವ ಅಮಿತ್‌ ಶಾ ಕಾರ್ಯತಂತ್ರ ವಿಫ‌ಲವಾಗಿದೆ. ಮಾತ್ರವಲ್ಲದೆ ಈ ಚುನಾವಣೆಯಲ್ಲಿ ಬಿಜೆಪಿಗೂ ಅಡ್ಡಮತದಾನದ ಬಿಸಿ ತಟ್ಟಿದ್ದು, ಪಕ್ಷದ ಶಾಸಕ ನಳಿನ್‌ ಕೊಠಾಡಿಯಾ ಅವರು ಅಹಮ್ಮದ್‌ ಪಟೇಲ್‌ ಅವರಿಗೆ ಮತ ಚಲಾಯಿಸಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ.

ಮಂಗಳವಾರ ನಡೆದ ಚುನಾವಣೆಯ ಫ‌ಲಿತಾಂಶ ಸಾಯಂಕಾಲವೇ ಪ್ರಕಟವಾಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಎರಡು ಪಕ್ಷಗಳ ಹೈಡ್ರಾಮ ನಡೆದ ಕಾರಣ ಮತ ಎಣಿಕೆ ಹಾಗೂ ಫ‌ಲಿತಾಂಶವನ್ನು ತಡೆಹಿಡಿಯಲಾಗಿತ್ತು. ಇಬ್ಬರು ಕಾಂಗ್ರೆಸ್‌ ಶಾಸಕರು ತಮ್ಮ ಮತಪತ್ರಗಳನ್ನು ಅಮಿತ್‌ ಶಾ ಅವರಿಗೆ ತೋರಿಸಿದ್ದಾರೆ, ಹಾಗಾಗಿ ಅಧಿಕೃತ ಚುನಾವಣಾ ಏಜೆಂಟ್‌ ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳಿಗೆ ಮತಪತ್ರವನ್ನು ತೋರಿಸುವಂತಿಲ್ಲ ಎಂಬ ನಿಯಮವನ್ನು ಮುಂದಿರಿಸಿಕೊಂಡು ಕಾಂಗ್ರೆಸ್‌ ನಿಯೋಗವು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಕಛೇರಿಗೆ ತೆರಳಿ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಸಹ ಘಟಾನುಘಟಿ ಸಚಿವರ ನೇತೃತ್ವದ ನಿಯೋಗವನ್ನು ಕಳುಹಿಸಿಕೊಟ್ಟಿತ್ತು. ಎರಡೂ ಕಡೆಯ ಸದಸ್ಯರ ವಾದಗಳನ್ನು ಆಲಿಸಿದ ಚುನಾವಣಾ ಆಯೋಗವು ಬಳಿಕ ಸಭೆ ಸೇರಿ ಈ ಎಲ್ಲಾ ವಿದ್ಯಮಾನಗಳ ಕುರಿತಾಗಿ ವಿವರವಾಗಿ ಚರ್ಚಿಸಿತು. ಬಳಿಕ ತಡರಾತ್ರಿ ತನ್ನ ತೀರ್ಪನ್ನು ಪ್ರಕಟಿಸಿದ ಆಯೋಗವು ಕಾಂಗ್ರೆಸ್‌ ಶಾಸಕರ ಮತಗಳನ್ನು ಅಸಿಂಧುಗೊಳಿಸಿ ತೀರ್ಪನ್ನು ನೀಡಿತು.

– ಗುಜರಾತ್‌ನ ಗಾಂಧಿನಗರದ ಮತಎಣಿಕೆ ಕೇಂದ್ರದಲ್ಲಿ ಮತ್ತೆ ಗರಿಗೆದರಿದ ಚಟುವಟಿಕೆ

– ಮತ ಎಣಿಕೆ ಪ್ರಾರಂಭ

– ಫ‌ಲಿತಾಂಶ ಈ ರೀತಿಯಾಗಿದೆ: ಅಮಿತ್‌ ಶಾ (46) ಹಾಗೂ ಸ್ಮತಿ ಇರಾನಿ (45) ಗೆಲುವು 

– ಅಹಮ್ಮದ್‌ ಪಟೇಲ್‌ 44 ಮತಗಳ ಗೆಲುವು

ಬಿಜೆಪಿಯ ತೃತೀಯ ಅಭ್ಯರ್ಥಿ ಬಲ್ವಂತ್‌ ಸಿಂಗ್‌ ರಜಪೂತ್‌ (39) ಮತಗಳು

ಟಾಪ್ ನ್ಯೂಸ್

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.