ಜನರ ಭಾವನೆಗಳ ಜತೆ ಚೆಲ್ಲಾಡುವ ಟ್ರಂಪ್, ಮೋದಿ ತಂತ್ರಗಾರಿಕೆ: ಸ್ಯಾಮ್ ಪಿತ್ರೋಡ
Team Udayavani, Apr 9, 2019, 10:55 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರಾಭಿಯಾನ ತಂತ್ರಗಾರಿಕೆ ಮತ್ತು ವಾಕ್ ಶೈಲಿ ಒಂದೇ ರೀತಿಯದ್ದಾಗಿದೆ. ಇಬ್ಬರೂ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಮುಖ್ಯಸ್ಥರಾಗಿರುವ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಡಿಜಿಟಲ್ ಯುಗದಲ್ಲಿ ರಾಜಕೀಯ ಪ್ರಚಾರಾಭಿಯಾನದ ಕುರಿತು ಮಾತನಾಡುತ್ತಿದ್ದ ಪಿತ್ರೋಡ (ಇವರು ದೀರ್ಘಕಾಲದಿಂದ ಗಾಂಧಿ ಕುಟುಂಬದ ಸಲಹೆಗಾರರಾಗಿದ್ದಾರೆ) ಆಧುನಿಕ ಡಿಜಿಟಲ್ ಯುಗವು ಕಾಲೋಚಿತ ಬೈಟ್, ಗಿಮಿಕ್ ಮತ್ತು ವಿಡಿಯೋ ಗಳನ್ನು ಒಳಗೊಂಡಿದ್ದು ಇದು ಪತ್ರಕರ್ತರು ಕೈಗೊಳ್ಳುವ ಸಾಂಪ್ರದಾಯಿಕ ಆಳ ವಿಶ್ಲೇಷಣೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಒಬಾಮಾ ಕಾಲದಲ್ಲೇ ಚುನಾವಣಾ ಪ್ರಚಾರಾಭಿಯಾನಕ್ಕೆ ಡಿಜಿಟಲ್ ಟೆಕ್ನಾಲಜಿಯ ನೈಜ ಬಳಕೆ ಆರಂಭವಾಗಿತ್ತು ಎಂದು ಹೇಳಿದ ಪಿತ್ರೋಡ, ಯುವ ಜನರನ್ನು ಸೆಳೆಯುವ ಉದ್ದೇಶದಿಂದ ಡಿಜಿಟಲ್ ತಂತ್ರಜ್ಞಾನವನ್ನು ಪ್ರಚಾರಾಭಿಯಾನಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡವರಲ್ಲಿ ಬರಾಕ್ ಒಬಾಮಾ ಅವರೇ ಮೊದಲ ನಾಯಕರು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ