Udayavni Special

ಕೋವಿಡ್ ನಿರ್ವಹಣೆ : ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ್ ಖರ್ಗೆ 6 ಸಲಹೆ  


Team Udayavani, May 9, 2021, 6:40 PM IST

fgdfgdddf

ನವದೆಹಲಿ: ದೇಶಕ್ಕೆ ಅಪ್ಪಳಿಸಿರುವ ಕೋವಿಡ್ ಎರಡನೇ ಅಲೆಯ ನಿರ್ವಹಣೆ ಕುರಿತು ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರು ಸಲಹೆ ನೀಡಿದ್ದಾರೆ.

ಭಾನುವಾರ ( ಮೇ.09) ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಖರ್ಗೆ, ಜನ ಸಾಮಾನ್ಯರಿಗೆ, ಮಧ್ಯಮ ವರ್ಗದ ಕುಟುಂಬಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡುತ್ತಿವೆ. ತಮ್ಮ ಪ್ರೀತಿ ಪಾತ್ರರನ್ನು ಉಳಿಸಿಕೊಳ್ಳಲು ಆಸ್ತಿ, ಆಭರಣ ಮಾರುತ್ತಿದ್ದಾರೆ.ಜೀವಮಾನವಿಡಿ ಬೆವರು ಸುರಿಸಿ ಉಳಿತಾಯ ಮಾಡಿದ ಹಣವನ್ನೆಲ್ಲ ಖರ್ಚು ಮಾಡುವಂತಾಗಿದೆ. ಇಂತಹ ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕು. ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟು ಅಸಾಧಾರಣ ರಾಷ್ಟ್ರೀಯ ಯುದ್ಧದಂತಹ ಪರಿಸ್ಥಿತಿ ನಿರ್ಮಿಸಿದೆ.ಇದರ ವಿರುದ್ಧ ನಾಗರಿಕ ಸಮಾಜ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ಮರೆತಂತಿದೆ ಎಂದು ಖರ್ಗೆ ಕಿಡಿ ಕಾರಿದ್ದಾರೆ.

ಸಾಮೂಹಿಕ ಮತ್ತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಸಮಗ್ರ ನೀಲನಕ್ಷೆಯನ್ನು ರೂಪಿಸಿ ಕೊರೋನಾ ಸಾಂಕ್ರಮಿಕ ರೋಗ ನಿಭಾಯಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಭಾರತೀಯರಿಗೆ ಲಸಿಕೆ ವ್ಯವಸ್ಥೆ ಮಾಡಬೇಕು. ಲಸಿಕೆಗಾಗಿ ನಿಗದಿಪಡಿಸಿದ 35 ಸಾವಿರ ಕೋಟಿ ರೂಪಾಯಿ ಬಳಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕೆಂದು ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಜೊತೆಗೆ ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈಗ ಲಸಿಕೆಗಳಿಗೆ ಶೇಕಡ 5 ರಷ್ಟು, ಪಿಪಿಇ ಕಿಟ್ ಗಳಿಗೆ ಶೇಕಡ 5 -12 ರಷ್ಟು, ಅಂಬುಲೆನ್ಸ್ ಗಳಿಗೆ ಶೇಕಡ 28, ಆಮ್ಲಜನಕ ಸಾಂದ್ರಕಗಳಿಗೆ ಶೇಕಡ 12 ರಷ್ಟು ತೆರಿಗೆ ಇದೆ. ಇದನ್ನು ಮನ್ನಾ ಮಾಡಬೇಕೆಂದು ಹೇಳಲಾಗಿದೆ.

ನಿರುದ್ಯೋಗಿ ವಲಸಿಗರಿಗೆ ನೆರವಾಗಲು ಪರಿಹಾರ ಸಾಮಗ್ರಿ ವಿತರಣೆ ಹೆಚ್ಚಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ವೇತನ ಹೆಚ್ಚಿಸಬೇಕು ಮತ್ತು ಕೆಲಸದ ದಿನವನ್ನು 100 -200 ದಿನಗಳಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢ

3654566666666666666666666

ಹಾನಗಲ್ ಉಪ ಚುನಾವಣೆ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್

ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ವಜ್ರಕ್ಕಾಗಿ ನೆಲ ಅಗೆಯುತ್ತಿದ್ದಾರೆ ಜನ

ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ಹಳ್ಳಿಯ ಜನರಿಂದ ವಜ್ರಕ್ಕಾಗಿ ಶೋಧ

delta-plus-coronavirus-covid19-vaccination-to-speed-up-in-coming-weeks-says-vk-paul

ಎವೈ.1 ಸೋಂಕನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಲಸಿಕಾ ಅಭಿಯಾನಕ್ಕೆ ಚುರುಕು : ಪೌಲ್

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

WhatsApp Image 2021-06-15 at 8.18.32 PM

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

delta-plus-coronavirus-covid19-vaccination-to-speed-up-in-coming-weeks-says-vk-paul

ಎವೈ.1 ಸೋಂಕನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಲಸಿಕಾ ಅಭಿಯಾನಕ್ಕೆ ಚುರುಕು : ಪೌಲ್

Goa AICC Incharge Dinesh Gundurao Statement aganist on BJP

ಬಿಜೆಪಿಯ ಭ್ರಷ್ಟಾಚಾರಗಳ ವಿರುದ್ಧ ಧ್ವನಿಯೆತ್ತಬೇಕಿದೆ :ಎಐಸಿಸಿ ಗೋವಾ ಉಸ್ತುವಾರಿ ಗುಂಡೂರಾವ್

1622658251-7176

ಅಮೆರಿಕದಲ್ಲಿ ಗ್ರಾಹಕ ವಲಯ ಕೇಂದ್ರೀತ ಎಸ್‌ಪಿಎಸಿ ಪ್ರಾರಂಭಿಸಿದ‌ ಮಣಿಪಾಲ್ ಗ್ರೂಪ್ ಅಧ್ಯಕ್ಷ

vaccination is only one weapon to Covid 19

ಜುಲೈ 30ರೊಳಗೆ ಗೋವಾದಾದ್ಯಂತ ಶೇ.100ರಷ್ಟು ಲಸಿಕೆಯ ಮೊದಲ ಡೋಸ್ ಪೂರ್ಣ : ಸಾವಂತ್

Second dose of Covid vaccine not needed for people already infected: Study

ಈಗಾಗಲೇ ಸೋಂಕಿಗೆ ಒಳಗಾದವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ : ಅಧ್ಯಯನ ವರದಿ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

15-13

ರೈತ ಸಂಪರ್ಕ ಕೇಂದ್ರದೆದುರು ರೈತರ ಪ್ರತಿಭಟನೆ

asdfgew3ertfdewerfg

ಆರೋಗ್ಯ ಸುರಕ್ಷತಾ ಕ್ರಮ ಅನುಸರಿಸಲು ಡಾ|ಬೀಳಗಿ ಸಲಹೆ

15-12

ಆಕ್ಸಿಜನ್‌ ಬ್ಯಾಂಕ್‌-ಸ್ಯಾನಿಟೈಸರ್‌ ಟ್ಯಾಂಕ್‌ಗೆ ಚಾಲನೆ

15-12

ಲಾಕ್‌ಡೌನ್‌ ಸಡಿಲ; ಎಲ್ಲೆಲ್ಲೂವಾಹನ-ಜನ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.