ಕಾಂಗ್ರೆಸ್‌ ಪಕ್ಷಾಧ್ಯಕ್ಷ ಪದಕ್ಕೆ ಅದಮ್ಯ ಚೇತನದ ನಾಯಕ ಬೇಕು: ಜ್ಯೋತಿರಾದಿತ್ಯ ಸಿಂದಿಯಾ

Team Udayavani, Jul 11, 2019, 3:48 PM IST

ಭೋಪಾಲ್‌ : ಪಕ್ಷಾಧ್ಯಕ್ಷ ಪದಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ ತರುವಾಯ ಕಾಂಗ್ರೆಸ್‌ ತೀವ್ರ ಸಂಕಷ್ಟ ಎದುರಿಸುತ್ತಿದೆ. ಈ ಪರೀಕ್ಷಾ ಕಾಲವನ್ನು ಸೂಕ್ತವಾಗಿ ಎದುರಿಸಲು ಎಲ್ಲ ಕಾಂಗ್ರೆಸಿಗರು ಜತೆಗೂಡಿ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕು ಎಂದು ಮಾಜಿ ಕಾಂಗ್ರೆಸ್‌ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನವನ್ನು ತುಂಬಲು ನಮಗೆ ಅಪಾರ ಚೈತನ್ಯಶಾಲಿ, ಶಕ್ತಿಯುತ ವ್ಯಕ್ತಿ ಬೇಕು ಎಂದು ಸಿಂದಿಯಾ ಹೇಳಿದರು.

ಕಾಂಗ್ರೆಸ್‌ ಪಕ್ಷದ ಎಲ್ಲ ಸದಸ್ಯರು ಜತೆಗೂಡಿ ಶ್ರಮಿಸಿ ರಾಹುಲ್‌ ಗಾಂಧಿ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆದು ಪಕ್ಷವನ್ನು ಬಲಪಡಿಸಬೇಕು ಎಂದು ಸಿಂದಿಯಾ ಹೇಳಿದರು.

ರಾಹುಲ್‌ ಗೆ ಬೆಂಬಲ ಮತ್ತು ಒಗ್ಗಟ್ಟನ್ನು ತೋರ್ಪಡಿಸುವ ಸಲುವಾಗಿ ಸಿಂದಿಯಾ ಅವರು ಕಳೆದ ವಾರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜನಾದೇಶವನ್ನು ಸ್ವೀಕರಿಸಿ ಉತ್ತರದಾಯಿತ್ವದ ಹೊಣೆ ಹೊತ್ತು ನಾನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಂದಿಯಾ ಅವರು ರಾಹುಲ್‌ ಗಾಂಧಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ ಹೇಳಿದ್ದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ