“ಕಾಂಗ್ರೆಸ್‌ ರಾಜೀನಾಮೆ ಪರ್ವ ತಾರಕಕ್ಕೆ

Team Udayavani, Jun 30, 2019, 5:31 AM IST


ಲಕ್ನೋ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿ ರುವ ರಾಜೀನಾಮೆ ಪರ್ವ, ಮತ್ತಷ್ಟು ತಾರಕ ಕ್ಕೇರಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಬೇಸರ ಗೊಂಡು ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಯುಪಿಸಿಸಿ) ಉಪಾಧ್ಯಕ್ಷರಾದ ರಂಜಿತ್‌ ಸಿಂಗ್‌ ಜುದೇವ್‌, ಆರ್‌.ಪಿ. ತ್ರಿಪಾಠಿ, ಪ್ರಧಾನ ಕಾರ್ಯದರ್ಶಿ ಅರಾಧನಾ ಮಿಶ್ರ ಮೋನಾ ಸಹಿತ 35 ಪದಾಧಿಕಾರಿಗಳು ಶನಿವಾರ ಪದತ್ಯಾಗ ಮಾಡಿದ್ದಾರೆ.

ಶುಕ್ರವಾರ, ಪಕ್ಷದ ಸಂಸದ ವಿವೇಕ್‌ ಟಂಕಾ ಅವರು ಯುಪಿಸಿಸಿಯ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಮತ್ತಷ್ಟು ರಾಜೀನಾಮೆಗಳು ಹರಿದುಬಂದಿವೆ. ಯುಪಿಸಿಸಿಯ ಮಾಧ್ಯಮ ಸಂಯೋಜಕ ರಾಜೀವ್‌ ಬಕ್ಷಿ, ಜಂಟಿ ಸಂಯೋಜಕ (ಮಾಧ್ಯಮ) ಪಿಯೂಶ್‌ ಮಿಶ್ರಾ, ಓಂಕಾರ್‌ ನಾಥ್‌ ಸಿಂಗ್‌, ಅಮರ್‌ನಾಥ್‌ ಅಗರ್ವಾಲ, ಮುಖೇಶ್‌ ಸಿಂಗ್‌ ಚೌಹಾಣ್‌, ಪ್ರಿಯಾಂಕಾ ಗುಪ್ತಾ ಹಾಗೂ ಅಶೋಕ್‌ ಸಿಂಗ್‌ ರಾಜೀನಾಮೆ ಸಲ್ಲಿಸಿದ ಇತರರು. ಯುಪಿಸಿಸಿ ಯಲ್ಲಿ 100ಕ್ಕೂ ಹೆಚ್ಚು ಸದಸ್ಯರಿದ್ದು, ಇವರಲ್ಲಿ ಸತೀಶ್‌ ಅಜ್ಮಾನಿ, ಶ್ಯಾಮ್‌ ಕಿಶೋರ್‌ ಶುಕ್ಲಾ, ಹನುಮಾನ್‌ ತ್ರಿಪಾಠಿ, ಪಕ್ಷದ ವಕ್ತಾರ ದ್ವಿಜೇಂದ್ರ ತ್ರಿಪಾಠಿ, ಶಿವ ಪಾಂಡೆ, ಪಂಕಜ್‌ ತಿವಾರಿ, ಮಂಜು ದೀಕ್ಷಿತ್‌ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿÉ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆಗಾಗಿ ಮಹಾರಾಷ್ಟ್ರ ಕಿಸಾನ್‌ ಕಾಂಗ್ರೆಸ್‌ ಮುಖ್ಯಸ್ಥ ಸ್ಥಾನಕ್ಕೆ ನಾನಾ ಪಟೋಲೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಪ್ರತಿಕ್ರಿಯೆ: ರಾಜೀನಾಮೆ ಪರ್ವಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಪಕ್ಷಕ್ಕೆ ರಾಹುಲ್‌ ಅವರೇ ನಾಯಕರಾಗಿರಬೇಕೆಂದು ಇಡೀ ದೇಶದಲ್ಲಿನ ಎಲ್ಲ ಕಾಂಗ್ರೆಸ್ಸಿಗರೂ ಬಯಸಿದ್ದಾರೆ ಎಂದಿದೆ. ಜತೆಗೆ, ಕಾಶ್ಮೀರದ ಬಿಕ್ಕಟ್ಟಿಗೆ ಮಾಜಿ ಪ್ರಧಾನಿ ನೆಹರೂ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆರೋಪವನ್ನು ಖಂಡಿಸಿರುವ ಕಾಂಗ್ರೆಸ್‌, ಶಾ ಅವರದ್ದು “ವಾಟ್ಸ್‌ ಆ್ಯಪ್‌ ಜ್ಞಾನ’ ಎಂದು ಟೀಕಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ