ಕಾಂಗ್ರೆಸ್‌ನ ಕನಿಷ್ಠ ಆದಾಯ ಸ್ಕೀಮ್‌ ಚುನಾವಣಾ ಗಿಮಿಕ್‌: ಯೋಗಿ ಆದಿತ್ಯನಾಥ್‌

Team Udayavani, Mar 26, 2019, 5:08 PM IST

ಗೋರಖ್‌ಪುರ : ‘ಕಾಂಗ್ರೆಸ್‌ ಪಕ್ಷದ ಕನಿಷ್ಠ ಆದಾಯ ಯೋಜನೆ ಕೇವಲ ಒಂದು ಚುನಾವಣಾ ಗಿಮಿಕ್‌ ‘ ಎಂದು ಟೀಕಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಎಸ್‌ ಪಿ ಮತ್ತು ಬಿಎಸ್‌ಪಿ ಜತೆಗೂಡಿ ಕಾಂಗ್ರೆಸ್‌ ಪಕ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ತಡೆಯುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ.

”ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್‌ ಪಕ್ಷ ಗರೀಬೀ ಹಠಾವೋ ಘೋಷಣೆಯನ್ನು ನೀಡಿತ್ತು. ಈಗ ಬಡವರಲ್ಲಿ ಕಡು ಬಡವರಿಗೆ ವರ್ಷಕ್ಕೆ 72,000 ರೂ. ಕನಿಷ್ಠ ಆದಾಯ ಒದಗಿಸುವುದಾಗಿ ಘೋಷಿಸಿರುವುದು ಚುನಾವಣಾ ಗಿಮಿಕ್‌” ಎಂದು ಆದಿತ್ಯನಾಥ್‌ ಅವರು ವಿಜಯ ಸಂಕಲ್ಪ ರಾಲಿಯಲ್ಲಿ ಭಾಷಣ ಮಾಡಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕಿರುವ ಅತೀ ದೊಡ್ಡ ಅಡೆತಡೆ ಎಂದರೆ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ; ಕಾಂಗ್ರೆಸ್‌ ಪಕ್ಷವಂತೂ ರಾಮ ಮಂದಿರ ನಿರ್ಮಾಣ ತಡೆಯುವ ನಿಟ್ಟಿನಲ್ಲಿ ವಕೀಲರ ದೊಡ್ಡ ಸೇನೆಯನ್ನೇ ಮುಂದೆ ತಂದಿದೆ ಎಂದು ಆದಿತ್ಯನಾಥ್‌ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ