ರಫೇಲ್‌ ತೀರ್ಪು ಕುರಿತ ತಪ್ಪು ಹೇಳಿಕೆ: ಎ.22ರೊಳಗೆ ಉತ್ತರಿಸಿ, ರಾಹುಲ್‌ ಗೆ ಸುಪ್ರಿಂ ಆದೇಶ

Team Udayavani, Apr 15, 2019, 12:44 PM IST

ಹೊಸದಲ್ಲಿ : ರಫೇಲ್‌ ಕೇಸ್‌ ತೀರ್ಪಿನಲ್ಲಿ ತಾನು ಹೇಳಿರದ ವಿಚಾರಗಳನ್ನು ತಪ್ಪಾಗಿ ಉಲ್ಲೇಖೀಸಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ರಾಹುಲ್‌ ಗಾಂಧಿ ಅವರು ಎ.22ರ ಒಳಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ರಫೇಲ್‌ ಕುರಿತಾದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿರದ ವಿಚಾರಗಳನ್ನು ಉಲ್ಲೇಖೀಸಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಕೋರ್ಟ್‌ ನಿಂದನೆಯ ಕ್ರಮವನ್ನು ಆಗ್ರಹಿಸಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಅವರ ಅರ್ಜಿಯನ್ನು ತಾನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

”ರಾಹುಲ್‌ ಗಾಂಧಿ ಮಾಡಿದ್ದಾರೆ ಎನ್ನಲಾಗಿರುವ ಭಾಷಣದಲ್ಲಿ , ಮಾಧ್ಯಮಕ್ಕೆ ಮತ್ತು ಸಾರ್ವಜನಿಕರಿಗೆ ನೀಡಿರುವ ಹೇಳಿಕೆಗಳಲ್ಲಿ ರಫೇಲ್‌ ತೀರ್ಪಿನ ಬಗ್ಗೆ ಆಡಿರುವ ಮಾತುಗಳನ್ನು ಸುಪ್ರಿಂ ಕೋರ್ಟಿಗೆ ತಪ್ಪಾಗಿ ಆರೋಪಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ; ಅಟಾರ್ನಿ ಜನರಲ್‌ ಅವರು ಆಕ್ಷೇಪಿಸಿರುವ ಕೆಲವು ದಾಖಲೆ ಪತ್ರಗಳು ಕಾನೂನು ಸಮ್ಮತವೆಂದು ಪರಿಗಣಿಸುವ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ ಎನ್ನಲಾಗಿರುವ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಕೋರ್ಟಿಗೆ ಇರಲಿಲ್ಲ ಎಂದು ಕೂಡ ನಾವು ಸ್ಪಷ್ಟಪಡಿಸಬಯಸುತ್ತೇವೆ” ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ