ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ನಾಳೆ ನಿರ್ಧಾರ

ಐದನೇ ಹಂತದ ಮತದಾನದಲ್ಲಿ ಕಣದಲ್ಲಿದ್ದಾರೆ ಪ್ರಮುಖ ನಾಯಕರು

Team Udayavani, May 5, 2019, 2:00 PM IST

ನವದೆಹಲಿ: ನಾಳೆ ಐದನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಒಟ್ಟು 51 ಕ್ಷೇತ್ರಗಳ ಮತದಾರರು ತಮ್ಮ ಸಂಸದರನ್ನು ಆಯ್ಕೆ ಮಾಡಲಿದ್ದಾರೆ. ಈ ಹಂತದ ಮತದಾನದ ವಿಶೇಷವೆಂದರೆ ಎಲ್ಲಾ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ, ಸ್ಮತಿ ಇರಾನಿ, ರಾಜ್ಯವರ್ಧನ್‌ ರಾಥೋಡ್‌, ಯು.ಪಿ.ಎ. ಅಧ್ಯಕ್ಷೆ ಸೋನಿಯಾ ಗಾಂಧಿ, ಜಯಂತ್‌ ಸಿನ್ಹಾ ಮೊದಲಾದವರ ಭವಿಷ್ಯ ನಾಳೆ ಇ.ವಿ.ಎಂ.ಗಳಲ್ಲಿ ಸೇರಲಿದೆ.

ಒಟ್ಟು 7 ರಾಜ್ಯಗಳ 51 ಲೋಕ ಸಭಾ ಸ್ಥಾನಗಳಿಗೆ ಮೇ 06 ಸೋಮವಾರದಂದು ಮತದಾನ ನಡೆಯಲಿದೆ. ಉತ್ತರ ಪ್ರದೇಶದ 14, ರಾಜಸ್ಥಾನದ 12, ಪಶ್ಚಿಮಬಂಗಾಲ ಮತ್ತು ಮಧ್ಯಪ್ರದೇಶದ ತಲಾ 7 ಸ್ಥಾನಗಳು, ಬಿಹಾರದ 5, ಜಾರ್ಖಂಡ್‌ ನ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 2 ಸ್ಥಾನಗಳಿಗೆ ಈ ಮತದಾನ ನಡೆಯಲಿದೆ.

ಈ 51 ಲೋಕಸಭಾ ಸ್ಥಾನಗಳಲ್ಲಿ ಪ್ರಸ್ತುತ 36 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಸಂಸದರಿದ್ದಾರೆ. 7 ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್‌ ನ ಸಂಸದರಿದ್ದರೆ, ರಾಷ್ಟ್ರೀಯ ಲೋಕ ಸಮತಾ ಪಕ್ಷ ಹಾಗೂ ಲೋಕ ಜನಶಕ್ತಿ ಪಕ್ಷ ತಲಾ ಒಂದೊಂದು ಕ್ಷೇತ್ರಗಳಲ್ಲಿ ತಮ್ಮ ಸಂಸದರನ್ನು ಹೊಂದಿದೆ. ಅನಂತನಾಗ್‌ ಕ್ಷೇತ್ರದಿಂದ 2014ರಲ್ಲಿ ಮೆಬೂಬ ಮುಫ್ತಿ ಆಯ್ಕೆಯಾಗಿದ್ದರು ಆದರೆ ಸದ್ಯಕ್ಕೆ ಆ ಕ್ಷೇತ್ರದ ಸಂಸದ ಸ್ಥಾನ ತೆರವಾಗಿದೆ. ಇನ್ನು 2014ರಲ್ಲಿ ಬಿಜೆಪಿ ಗೆದ್ದಿದ್ದ 2 ಕ್ಷೇತ್ರಗಳು ಸದ್ಯಕ್ಕೆ ಖಾಲಿಯಾಗಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ