ಮಕ್ಕಳ ಕತ್ತು ಸೀಳಿ ಹತ್ಯೆಗೈದ ನಂತರ 8ನೇ ಮಹಡಿಯಿಂದ ಹಾರಿ ದಂಪತಿ ಆತ್ಮಹತ್ಯೆಗೆ ಶರಣು!

Team Udayavani, Dec 3, 2019, 1:38 PM IST

ಲಕ್ನೋ: ಫ್ಯಾಕ್ಟರಿಯ ಮಾಲೀಕ ಹಾಗೂ ಪತ್ನಿ ತಮ್ಮ ಮಕ್ಕಳ ಕತ್ತನ್ನು ಸೀಳಿ ಕೊಲೆಗೈದ ನಂತರ ಎಂಟನೇ ಮಹಡಿ ಮೇಲಿನಿಂದ ಕೆಳಕ್ಕೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಇಡೀ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದಾರೆ. ಮತ್ತೊಬ್ಬಳು ಮಹಿಳೆ ಕೂಡಾ ಮಹಡಿ ಮೇಲಿನಿಂದ ಜಿಗಿದಿದ್ದು, ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ಎರಡನೇ ಮಹಿಳೆ ಫ್ಯಾಕ್ಟರಿ ಮಾಲೀಕನ ವ್ಯವಹಾರ ಪಾಲುದಾರರಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಕೆಲವರ ಪ್ರಕಾರ ಆಕೆ ಎರಡನೇ ಪತ್ನಿ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ. ದಂಪತಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಂದಿರಾಪುರಂನ ವೈಭವ್ ಖಾಂಡ್ ನಲ್ಲಿರುವ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ