ಆಹ್ವಾನ ಪತ್ರಿಕೆಗೆ ಷೇರು ಮಾರ್ಕೆಟ್ ಟಚ್!
Team Udayavani, Dec 4, 2022, 7:25 AM IST
ಮದುವೆ ಆಮಂತ್ರಣ ಪತ್ರದಲ್ಲಿ ಸೃಜನಶೀಲತೆ ಹೊಸದೇನಲ್ಲ. ಆದರೆ, ಇತ್ತೀಚೆಗೆ ಷೇರು ಮಾರುಕಟ್ಟೆ ಮೇಲೆ ಆಕರ್ಷಿತರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವಂತೆಯೇ, ಮಹಾರಾಷ್ಟ್ರದ ಜೋಡಿಯೊಂದು “ಷೇರು ಮಾರುಕಟ್ಟೆ’ ಥೀಮ್‌ನಲ್ಲೇ ತಮ್ಮ ಮದುವೆ ಕಾರ್ಡ್ ತಯಾರಿಸಿದೆ.
ಇಲ್ಲಿ ವರ ಮತ್ತು ವಧುವಿನ ಹೆಸರನ್ನು “ಡಾ.ಸಂದೇಶ್ ಮೆಡಿಸಿನ್ ಲಿಮಿಟೆಡ್ ಮತ್ತು ಡಾ.ದಿವ್ಯಾ ಅನಸ್ತೇಷಿಯಾ ಲಿ.’ ಎಂದು ನಮೂದಿಸಲಾಗಿದೆ. ಕಾರ್ಡ್‌ಗೆ “ಐಪಿಒ'(ಇನ್ವಿಟೇಷನ್ ಆಫ್ ಪ್ರೀಷಿಯಸ್ ಅಕೇಶನ್) ಎಂಬ ಶೀರ್ಷಿಕೆ ನೀಡಲಾಗಿದೆ.
“ವಿಲೀನ ಒಪ್ಪಂದದ ಪ್ರಕಾರ, ವಿಲೀನಗೊಂಡ ಕಂಪನಿಗಳು ನಿಬಂಧನೆಗಳ ಅನ್ವಯ(ಹಿಂದೂ ಸಂಪ್ರದಾಯ) ಲಿಸ್ಟಿಂಗ್ ಆಗುತ್ತಿವೆ’ ಎಂದು ಬರೆಯಲಾಗಿದೆ. ಮದುವೆ ಕಾರ್ಯಕ್ರಮವನ್ನು “ಲಿಸ್ಟಿಂಗ್ ಕಂಪನಿ’ ಎಂದೂ, ಸ್ನೇಹಿತರು, ಕುಟುಂಬಸ್ಥರನ್ನು “ರಿಟೇಲ್ ಹೂಡಿಕೆದಾರರು’ ಎಂದೂ ಕರೆಯಲಾಗಿದೆ.
ರಿಟೇಲ್ ಹೂಡಿಕೆದಾರರು ಬಂದು ವಿಲೀನಗೊಳ್ಳುತ್ತಿರುವ ಕಂಪನಿಗೆ “ಆಶೀರ್ವಾದ’ವೆಂಬ ಬಂಡವಾಳವನ್ನು ಹೂಡಿಕೆ ಮಾಡಬೇಕು ಎಂದು ಬರೆಯಲಾಗಿದೆ. ಈ ಆಹ್ವಾನಪತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಬೈಲ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್
ಊಟದ ತಟ್ಟೆ ವಿಚಾರ: ಮದುವೆ ಸಮಾರಂಭದಲ್ಲೇ ವ್ಯಕ್ತಿಯ ಕೊಲೆಗೈದ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ
ಒಂದು ವೇಳೆ ಕಾಂಗ್ರೆಸ್, ಸಿಪಿಐಎಂ ಅಧಿಕಾರದಲ್ಲಿದ್ದಿದ್ದರೆ…ತ್ರಿಪುರಾದಲ್ಲಿ ಸಿಎಂ ಯೋಗಿ …
ಕೇಂದ್ರದಿಂದ ಕರ್ನಾಟಕಕ್ಕೆ ʻಹೆದ್ದಾರಿʼ ಭಾಗ್ಯ
ಜಮ್ಮು-ಕಾಶ್ಮೀರದಲ್ಲಿ ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿದೆ…ಕಾಂಗ್ರೆಸ್ ಗೆ ಮೋದಿ ತಿರುಗೇಟು