ಆಸಾರಾಂ ಬಾಪು ಸಹ ಆರೋಪಿ ಶಿಲ್ಪಿ ಶಿಕ್ಷೆ ಅಮಾನತು, ಜಾಮೀನು ಮಂಜೂರು

Team Udayavani, Sep 29, 2018, 5:58 PM IST

ಜೋಧ್‌ಪುರ : ಆಸಾರಾಂ ಬಾಪು ಲೈಂಗಿಕ ಹಲ್ಲೆ ಪ್ರಕರಣದ ಸಹ ಆರೋಪಿಗೆ ರಾಜಸ್ಥಾನ ಹೈಕೋರ್ಟ್‌ ಇಂದು ಶನಿವಾರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿರುವುದಾಗಿ ಆರೋಪಿಯ ವಕೀಲರು ತಿಳಿಸಿದ್ದಾರೆ.

ಆಸಾರಾಂ ಬಾಪು ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸಂಚಿತಾ ಗುಪ್ತಾ ಅಲಿಯಾಸ್‌ ಶಿಲ್ಪಿ ಗೆ ವಿಚಾರಣಾ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಇಂದು ಶನಿವಾರ ರಾಜಸ್ಥಾನ ಹೈಕೋರ್ಟ್‌ 2 ಲಕ್ಷ ರೂ. ವೈಯಕ್ತಿಕ ಬಾಂಡ್‌ ಮತ್ತು ತಲಾ 1 ಲಕ್ಷ ರೂ. ಗಳ ಎರಡು ಶೂರಿಟಿ ಬಾಂಡ್‌ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತು. 

ಜಸ್ಟಿಸ್‌ ವಿಜಯ್‌ ಬಿಷ್ಣೋಯಿ ಅವರು ಇಂದು ಈ ಆದೇಶ ಹೊರಡಿಸಿದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ