ಹಣಕಾಸು ವಹಿವಾಟು ಪ್ರಕರಣ ವರ್ಗಾವಣೆ ಪ್ರಶ್ನಿಸಿದ್ದ ಜೈನ್ ಮನವಿ ವಜಾಗೊಳಿಸಿದ ಹೈಕೋರ್ಟ್
ಜಡ್ಜ್ ವಿಕಾಸ್ ಧುಲ್ಲಾಗೆ ವರ್ಗಾಯಿಸಿ ಆದೇಶ ನೀಡಿದ್ದರು. ಈ ಆದೇಶವನ್ನು ಜೈನ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Team Udayavani, Oct 1, 2022, 4:23 PM IST
ನವದೆಹಲಿ: ತನ್ನ ವಿರುದ್ಧ ದಾಖಲಾಗಿರುವ ಅಕ್ರಮ ಹಣಕಾಸು ವಹಿವಾಟು ಪ್ರಕರಣವನ್ನು ಮತ್ತೊಂದು ಕೋರ್ಟ್ ಗೆ ವರ್ಗಾಯಿಸಿರುವ ಕೆಳ ಕೋರ್ಟ್ ನ ಆದೇಶ ಪ್ರಶ್ನಿಸಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಸಲ್ಲಿಸಿರುವ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಶನಿವಾರ (ಅಕ್ಟೋಬರ್ 01) ವಜಾಗೊಳಿಸಿದೆ.
ಇದನ್ನೂ ಓದಿ:ಭಾರತಕ್ಕೆ ಮತ್ತೊಬ್ಬ ಜಹೀರ್ ಖಾನ್ ಸಿಕ್ಕಿದ್ದಾನೆ; ವೇಗಿಯನ್ನು ಹೊಗಳಿದ ಕಮ್ರಾನ್ ಅಕ್ಮಲ್
“ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪ್ರಕರಣವನ್ನು ವರ್ಗಾವಣೆ ಮಾಡುವಾಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಎಲ್ಲಾ ವಿಚಾರಗಳನ್ನು ಪರಿಗಣಿಸಿದ್ದಾರೆ. ಅಷ್ಟೇ ಅಲ್ಲ ಇದರಿಂದ ಯಾವುದೇ ಕಾನೂನು ಬಾಹಿರ ನಿರ್ಧಾರ ತೆಗೆದುಕೊಂಡಿದ್ದಾರೆಂದು ಭಾವಿಸಬೇಕಾಗಿಲ್ಲ ಎಂದು ಹೈಕೋರ್ಟ್ ಜಸ್ಟೀಸ್ ಯೋಗೇಶ್ ತಿಳಿಸಿದ್ದಾರೆ.
ಇದು ನ್ಯಾಯಾಧೀಶರ ಪ್ರಾಮಾಣಿಕತೆ ಅಥವಾ ಆದೇಶದ ಪ್ರಶ್ನೆಯಲ್ಲ. ಆದರೆ ಅರ್ಜಿದಾರರ ಮನಸ್ಸಿನಲ್ಲಿರುವ ಆತಂಕವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿ, ಮನವಿಯನ್ನು ವಜಾಗೊಳಿಸಿರುವುದಾಗಿ ವರದಿ ವಿವರಿಸಿದೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23ರಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಜಡ್ಜ್ ವಿನಯ್ ಕುಮಾರ್ ಗುಪ್ತಾ ಅವರು ಪ್ರಕರಣವನ್ನು ವಿಶೇಷ ಜಡ್ಜ್ ವಿಕಾಸ್ ಧುಲ್ಲಾಗೆ ವರ್ಗಾಯಿಸಿ ಆದೇಶ ನೀಡಿದ್ದರು. ಈ ಆದೇಶವನ್ನು ಜೈನ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.