ಡೆಡ್ಲಿ ಕೋವಿಡ್ 19: ಕೇವಲ 2 ದಿನಗಳಲ್ಲಿಯೇ 4ರಿಂದ 5 ಲಕ್ಷಕ್ಕೆ ಏರಿಕೆ ಕಂಡ ಕೋವಿಡ್ ಸೋಂಕು

ಮಾರ್ಚ್ 26ರ ರಾತ್ರಿ 11.45ರವರೆಗೆ ಜಾಗತಿಕವಾಗಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 22,993

Team Udayavani, Mar 27, 2020, 10:19 AM IST

ಡೆಡ್ಲಿ ಕೋವಿಡ್ 19: ಕೇವಲ 2 ದಿನಗಳಲ್ಲಿಯೇ 4ರಿಂದ 5 ಲಕ್ಷಕ್ಕೆ ಏರಿಕೆ ಕಂಡ ಕೋವಿಡ್ ಸೋಂಕು

Representative Image

ನವದೆಹಲಿ: ಮಾರಣಾಂತಿಕ ಕೋವಿಡ್ 19 ವೈರಸ್ ವಿರುದ್ಧ ಜಾಗತಿಕವಾಗಿ ಕಠಿಣ ಕ್ರಮಗಳನ್ನು ಅನುಸರಿಸುತ್ತಿರುವ ನಡುವೆಯೇ ಕೋವಿಡ್ 19 ಸೋಂಕಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹಾಗೂ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವರದಿ ತಿಳಿಸಿದೆ.

ಅಮೆರಿಕದ ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿಯ ಅಂಕಿ ಅಂಶದ ಪ್ರಕಾರ, ಮಾರ್ಚ್ 26ರ ರಾತ್ರಿ 11.45ರವರೆಗೆ ಜಾಗತಿಕವಾಗಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 22,993ಕ್ಕೆ ಏರಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ 5,10,108. ಇದೀಗ ವಿಶ್ವಾದ್ಯಂತ ಕೋವಿಡ್ 19 ಸೋಂಕು ದೃಢಪಟ್ಟವರ ಸಂಖ್ಯೆ 5,31,860ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 24,057(ಮಾ.27 ಬೆಳಗ್ಗೆ 8.40ರವರೆಗೆ) ಎಂದು ವಿವರಿಸಿದೆ.

ಕೇವಲ ಎರಡು ದಿನಗಳಲ್ಲಿ ನಾಲ್ಕು ಲಕ್ಷ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 5ಲಕ್ಷಕ್ಕೂ ಮೀರಿ ಹೋಗಿದೆ. ಮಿತಿ ಮೀರುತ್ತಿರುವ ಕೋವಿಡ್ 19 ನಿಂದಾಗಿ ವೈದ್ಯ ಜಗತ್ತು ಬೆಚ್ಚಿಬಿದ್ದಿದೆ. ಚೀನಾದ ವುಹಾನ್ ನಲ್ಲಿ 2019ರ ಡಿಸೆಂಬರ್ 31ರಂದು ಕಾಣಿಸಿಕೊಂಡ ಕೋವಿಡ್ 19 ವೈರಸ್ ಒಂದು ಲಕ್ಷ ಮಂದಿ ಸೋಂಕು ಪೀಡಿತರನ್ನು ಪತ್ತೆಹಚ್ಚಲು 67 ದಿನಗಳು ಬೇಕಾಗಿತ್ತು.

ಆ ನಂತರದ ಒಂದು ಲಕ್ಷ 11 ದಿನಗಳಲ್ಲಿ ಪತ್ತೆಯಾಗಿತ್ತು. ಬಳಿಕ ನಾಲ್ಕು ದಿನಗಳಲ್ಲಿ ಮೂರು ಲಕ್ಷ ಪತ್ತೆಯಾಗಿತ್ತು. ನಂತರದ ಮೂರು ದಿನಗಳಲ್ಲಿ 3ರಿಂದ 4 ಲಕ್ಷಕ್ಕೆ ಏರಿತ್ತು. ತದನಂತರ ಎರಡು ದಿನಗಳಲ್ಲಿ ಒಂದು ಲಕ್ಷ ಮಂದಿ ಸೋಂಕು ಪೀಡಿತರು ಪತ್ತೆಯಾಗಿದ್ದರು ಎಂದು ವರದಿ ವಿವರಿಸಿದೆ.

ಎರಡು ದಿನಗಳಲ್ಲಿ ವಿಶ್ವಾದ್ಯಂತ 4ರಿಂದ 5 ಲಕ್ಷಕ್ಕೆ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಸುಮಾರು 170 ದೇಶಗಳಲ್ಲಿ ಈವರೆಗೆ ಕೋವಿಡ್ 19 ಪ್ರಕರಣ ಪತ್ತೆಯಾಗಿದೆ ಎಂದು ಸಿಎಸ್ ಎಸ್ ಇ ತಿಳಿಸಿದೆ.

ಚೀನಾ ಹೊರತುಪಡಿಸಿ ಇಟಲಿ, ಅಮೆರಿಕ, ಸ್ಪೇನ್, ಜರ್ಮನಿ, ಇರಾನ್, ಫ್ರಾನ್ಸ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಇಟಲಿಯಲ್ಲಿ ಅತ್ಯಧಿಕ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8,215ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಟಾಪ್ ನ್ಯೂಸ್

1-fdffds

ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಗುಜರಾತ್‌, ಹಿಮಾಚಲದಲ್ಲೂ ಕಾಂಗ್ರೆಸ್‌ ಸೋಲು ಖಚಿತ: ಪ್ರಶಾಂತ್‌ ಕಿಶೋರ್‌

ಗುಜರಾತ್‌, ಹಿಮಾಚಲದಲ್ಲೂ ಕಾಂಗ್ರೆಸ್‌ ಸೋಲು ಖಚಿತ: ಪ್ರಶಾಂತ್‌ ಕಿಶೋರ್‌

ಬಿಜೆಪಿ ಸರ್ಕಾರದಿಂದ ಮಹಿಳಾ ವಿರೋಧಿ ನೀತಿ: ಪುಷ್ಪಾ ಅಮರನಾಥ್‌

ಬಿಜೆಪಿ ಸರ್ಕಾರದಿಂದ ಮಹಿಳಾ ವಿರೋಧಿ ನೀತಿ: ಪುಷ್ಪಾ ಅಮರನಾಥ್‌

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌

ಮೇ 21 ರಿಂದ 2 ದಿನಗಳ ಗೃಹ ಸಚಿವ ಅಮಿತ್‌ ಶಾ ಅರುಣಾಚಲ ಪ್ರವಾಸ

ಮೇ 21 ರಿಂದ 2 ದಿನಗಳ ಗೃಹ ಸಚಿವ ಅಮಿತ್‌ ಶಾ ಅರುಣಾಚಲ ಪ್ರವಾಸಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fdffds

ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಗುಜರಾತ್‌, ಹಿಮಾಚಲದಲ್ಲೂ ಕಾಂಗ್ರೆಸ್‌ ಸೋಲು ಖಚಿತ: ಪ್ರಶಾಂತ್‌ ಕಿಶೋರ್‌

ಗುಜರಾತ್‌, ಹಿಮಾಚಲದಲ್ಲೂ ಕಾಂಗ್ರೆಸ್‌ ಸೋಲು ಖಚಿತ: ಪ್ರಶಾಂತ್‌ ಕಿಶೋರ್‌

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌

ಮೇ 21 ರಿಂದ 2 ದಿನಗಳ ಗೃಹ ಸಚಿವ ಅಮಿತ್‌ ಶಾ ಅರುಣಾಚಲ ಪ್ರವಾಸ

ಮೇ 21 ರಿಂದ 2 ದಿನಗಳ ಗೃಹ ಸಚಿವ ಅಮಿತ್‌ ಶಾ ಅರುಣಾಚಲ ಪ್ರವಾಸ

MUST WATCH

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

ಹೊಸ ಸೇರ್ಪಡೆ

1-fdffds

ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ

ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಕುಮಟಾ : ಧಾರಾಕಾರ ಮಳೆಗೆ ಜನಜೀವತ ಅಸ್ತವ್ಯಸ್ತ

ಕುಮಟಾ : ಧಾರಾಕಾರ ಮಳೆಗೆ ಜನಜೀವತ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.