ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ
Team Udayavani, Jan 17, 2022, 12:02 PM IST
ಹೊಸದಿಲ್ಲಿ: ಕೋವಿಡ್ ಲಸಿಕೆಯನ್ನು ಪಡೆಯುವುದು ಕಡ್ಡಾಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಇಂದು ಕೇಂದ್ರ ಸರ್ಕಾರ ತಿಳಿಸಿದೆ.
“ಕೋವಿಡ್-19 ವ್ಯಾಕ್ಸಿನೇಷನ್ ಪ್ರಸ್ತುತ ನಡೆಯುತ್ತಿರುವ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೊಡ್ಡ ಸಾರ್ವಜನಿಕ ಹಿತಾಸಕ್ತಿಯಾಗಿದೆ. ಎಲ್ಲಾ ನಾಗರಿಕರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವಿವಿಧ ಮಾಧ್ಯಮಗಳ ಮೂಲಕ ಸರಿಯಾಗಿ ಜಾಹೀರಾತು, ಸಲಹೆ ಮತ್ತು ಸಂವಹನ ನಡೆಸಲಾಗಿದೆ” ಎಂದು ಕೇಂದ್ರ ಹೇಳಿದೆ.
ಆದರೆ ಯಾವುದೇ ವ್ಯಕ್ತಿಗೆ ಒತ್ತಾಯಪೂರ್ವಕವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತಿಲ್ಲ. ಲಸಿಕೆ ಪಡೆಯುತ್ತಿರುವ ವ್ಯಕ್ತಿಯ ಪೂರ್ವಾನುಮತಿಯಿಲ್ಲದೆ ಲಸಿಕೆ ನೀಡುತ್ತಿಲ್ಲ ಎಂದು ಕೇಂದ್ರ ಸ್ಪಷ್ಟ ಪಡಿಸಿದೆ.
ಇದನ್ನೂ ಓದಿ:ಇಳಿಮುಖದತ್ತ ಸೋಂಕು: ದೇಶದಲ್ಲಿ 2.59 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ
ವಿಕಲಾಂಗ ವ್ಯಕ್ತಿಗಳಿಗೆ ಮನೆ ಮನೆಗೆ ತೆರಳಿ ಕೋವಿಡ್-19 ಲಸಿಕೆ ನೀಡುವ ಬಗ್ಗೆ ಎನ್‌ಜಿಒ ಎವಾರಾ ಫೌಂಡೇಶನ್ ನ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರವು ಈ ಮಾಹಿತಿ ನೀಡಿದೆ.
ಲಸಿಕೆಗೆ ಒಂದು ವರ್ಷ: 365 ದಿನ, 157 ಕೋಟಿ ಡೋಸ್ ಲಸಿಕೆ, ಶೇ.70ರಷ್ಟು ವಯಸ್ಕ ಜನಸಂಖ್ಯೆಗೆ ಪೂರ್ಣ ಲಸಿಕೆ… ಇದು ಲಸಿಕೆ ಪ್ರಕ್ರಿಯೆಯಲ್ಲಿ ಭಾರತದ ಸಾಧನೆ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2021ರ ಜ.16ರಂದು ದೇಶಾದ್ಯಂತ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕೆಲಸ ಆರಂಭವಾಯಿತು. ಈ ಒಂದು ವರ್ಷದಲ್ಲಿ ಒಟ್ಟು 157 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದ್ದು, ಕಡಿಮೆ ಸಮಯದಲ್ಲೇ ಈ ಪ್ರಮಾಣದ ಮಂದಿಗೆ ಲಸಿಕೆ ನೀಡಿದ ದಾಖಲೆಯನ್ನೂ ಭಾರತ ನಿರ್ಮಾಣ ಮಾಡಿದೆ. ಒಟ್ಟಾರೆ, ಶೇ.70ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ಅಂದರೆ, ಅರ್ಹ ಜನಸಂಖ್ಯೆಯ 65 ಕೋಟಿ ಮಂದಿಗೆ ಲಸಿಕೆ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ