ಹೆರಿಗೆಗಾಗಿ 100 ಕಿ.ಮೀ. ಅಲೆದಾಟ ; ಕೋವಿಡ್ ಸೋಂಕಿತೆಯ ಪರದಾಟ
Team Udayavani, May 4, 2020, 7:36 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ ಸೋಂಕಿತ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ 100 ಕಿ.ಮೀ. ಪ್ರಯಾಣಿಸಿ ಬಳಿಕ ಮಗುವಿಗೆ ಜನ್ಮ ನೀಡಿದ ಹೃದಯ ವಿದ್ರಾವಕ ಘಟನೆ ಶ್ರೀನಗರದಲ್ಲಿ ನಡೆದಿದೆ.
ಈ ರೀತಿ ಹೆರಿಗೆಗೆ ಒಳಗಾಗಲು ಕಷ್ಟಪಟ್ಟು ಮಗುವನ್ನು ಪ್ರಸವಿಸಿದ ಮಹಿಳೆಯ ಹೆಸರು ಶಾದಾ ಎಂದು ತಿಳಿದುಬಂದಿದ್ದು ಈ ಮಹಿಳೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನ ತೆಲ್ವಾನಿಯವರಾಗಿದ್ದಾರೆ.
ಶುಕ್ರವಾರ ರಾತ್ರಿ ಶಾದಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಪತಿ ಜಾವೇದ್ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ 8ಕ್ಕೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ದೂರದ ಅಚಬಲ್ ಎಂಬಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಅಲ್ಲಿನ ವೈದ್ಯರು ಶ್ರೀನಗರದ ಎಸ್ಕೆಐಎಂಎಸ್ ಆಸ್ಪತ್ರೆಗೆ ಕರೆದು ಹೋಗುವಂತೆ ಸೂಚಿಸಿದರು. ಅಲ್ಲಿಗೆ ತೆರಳಿದಾಗ ಅಲ್ಲಿನ ಸಿಬಂದಿಯೂ ಹೆರಿಗೆ ಮಾಡಲು ನಿರಾಕರಿಸಿದ್ದರಿಂದ ಶಾದಾ ಬಹಳಷ್ಟು ನೋವು ಅನುಭವಿಸಬೇಕಾಗಿ ಬಂತು.
ಅಂತಿಮವಾಗಿ ಲಾಲ್ ಡೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಶನಿವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಮಗುವಿಗೆ ಶಾದಾ ಜನ್ಮ ನೀಡಿದರು. ಇಲ್ಲಿಗೆ ಭೇಟಿ ನೀಡುವ ವೇಳೆಗೆ ಅವರು ಒಟ್ಟು 100 ಕಿಮೀ ಕ್ರಮಿಸಿದಂತಾಗಿತ್ತು.
ದುರದೃಷ್ಟವಶಾತ್ ಬಳಿಕ ಕೋವಿಡ್ ಸೋಂಕು ಪತ್ತೆ ಪರೀಕ್ಷೆಯಲ್ಲಿ ಈಕೆಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಇದೀಗ ಈ ಮಹಿಳೆಗೆ ಚಿಕಿತ್ಸೆ ನೀಡಿರುವ ಮತ್ತು ಹೆರಿಗೆ ಮಾಡಿಸಿರುವ ವೈದ್ಯಕೀಯ ತಂಡವನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ