Udayavni Special

ಲಸಿಕೆ ಕುರಿತ ಗಾಳಿಸುದ್ದಿಗಳಿಗೆ ಕೇಂದ್ರ ಗುದ್ದು


Team Udayavani, Jan 16, 2021, 1:46 AM IST

ಲಸಿಕೆ ಕುರಿತ ಗಾಳಿಸುದ್ದಿಗಳಿಗೆ ಕೇಂದ್ರ ಗುದ್ದು

ಹೊಸದಿಲ್ಲಿ: ಶತಕೋಟಿ ಭಾರತೀಯರು ನಿರೀಕ್ಷಿಸುತ್ತಿದ್ದ ಶುಭದಿನ ಕೊನೆಗೂ ಎದುರು ನಿಂತಿದೆ. ಕೋವಿಡ್ ಸಂಹಾರಕ್ಕೆ “ಸಂಜೀವಿನಿ’ ವಿತರಣೆಗೆ ಕ್ಷಣಗಣನೆ ಶುರುವಾಗಿದೆ. ಏತನ್ಮಧ್ಯೆ, ಲಸಿಕೆಯಿಂದ ಯಾವುದೇ ದೈಹಿಕ ಅಪಾಯಗಳಿಲ್ಲ ಎನ್ನುವ ಮೂಲಕ ಆರೋಗ್ಯ ಸಚಿವ ಹರ್ಷವರ್ಧನ್‌, ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

“ಕೋವಿಡ್ ಲಸಿಕೆಯಿಂದ ಬಂಜೆತನ ಕಾಡುತ್ತದೆ’ - ಮುಂತಾದ ಗಾಳಿಸುದ್ದಿಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಸಚಿವರು ಟ್ವಿಟರಿನಲ್ಲಿ ಮಾಡಿದ್ದಾರೆ. ” ಕೋವಿಡ್ ಲಸಿಕೆಯಿಂದ ಮಹಿಳೆಗಾಗಲೀ, ಪುರುಷನಿಗಾಗಲಿ ಬಂಜೆತನ ಬರುತ್ತದೆ ಎನ್ನುವುದರಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇಂಥ ಗಾಳಿಸುದ್ದಿಗಳಿಗೆ ಯಾರೂ ಕಿವಿಗೊಡಬಾರದು’ ಎಂದು ತಿಳಿ ಹೇಳಿದ್ದಾರೆ.

ಗಂಭೀರ ಸೈಡ್‌ಎಫೆಕ್ಟ್ಗಳಿಲ್ಲ: “ಇಂಜೆಕ್ಷನ್‌ ಪಡೆದಾಗ ಕೆಲವೇ ಕೆಲವರಿಗೆ ಸಣ್ಣಜ್ವರ, ಭುಜದಲ್ಲಿ ನೋವು, ತಲೆನೋವು, ಆಯಾಸ, ಸಣ್ಣಪುಟ್ಟ ಅಸ್ವಸ್ಥತೆ, ವಾಕರಿಕೆ ಕಾಣಿಸಿಕೊಳ್ಳಬಹುದಷ್ಟೇ. ಈ ಅಡ್ಡಪರಿಣಾಮಗಳು ಕೇವಲ ತಾತ್ಕಾಲಿಕ. ಕೆಲವೇ ಸಮಯದಲ್ಲಿ ಇವು ದೂರವಾಗುತ್ತವೆ. ಕೊರೊನಾದ ಮುಂದೆ ಈ ಪುಟ್ಟ ಸಮಸ್ಯೆಗಳು ಏನೂ ಅಲ್ಲ’ ಎಂದು ಧೈರ್ಯ ತುಂಬಿದ್ದಾರೆ.

ಲಸಿಕೆಗೆ “ಸೂಪರ್‌’ ಶಕ್ತಿ!: ಇದರ ಬೆನ್ನಲ್ಲೇ, ವಿಜ್ಞಾನಿಗಳು ಶೋಧಿಸಿರುವ ಲಸಿಕೆ ಕೊರೊನಾವಲ್ಲದೆ, ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವಂಥ ವೈರಾಣುಗಳನ್ನೂ ನಿಯಂತ್ರಿಸುವಷ್ಟು ಶಕ್ತಿಶಾಲಿ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾ ತಜ್ಞರ ಈ ಸಂಶೋಧನೆ “ಜರ್ನಲ್‌ ಸೈನ್ಸ್‌’ನಲ್ಲಿ ಪ್ರಕಟವಾಗಿದೆ. “ಲಸಿಕೆಯನ್ನು 60 ತದ್ರೂಪಿ ಪ್ರೊಟೀನ್‌ಗಳಿಂದ ತಯಾರಿಸಲಾಗಿದ್ದು, ಪ್ರತಿಯೊಂದು ಸಣ್ಣ ಪ್ರೊಟೀನ್‌ಗಳೂ ಪ್ರತಿರೋಧಕ ರಕ್ಷಣೆ ಒದಗಿಸುತ್ತವೆ’ ಎಂದಿದೆ.

ಸಕ್ರಿಯ ಪ್ರಕರಣ ಇಳಿಕೆ : ಏತನ್ಮಧೆ  ದೇಶದಲ್ಲಿ ಲಸಿಕೆ ನೀಡಿಕೆ ಶುರುವಾಗುತ್ತಿರುವಂತೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ 2.13 ಲಕ್ಷಕ್ಕೆ ಇಳಿಕೆಯಾಗಿದೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ  15,590 ಮಂದಿಗೆ ಸೋಂಕು ದೃಢಪಟ್ಟಿದೆ.  191 ಮಂದಿ ಸಾವನ್ನಪ್ಪಿದ್ದಾರೆ.

ಟಾಪ್ ನ್ಯೂಸ್

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Untitled-1

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ಅದೃಷ್ಟವಂತ!

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

My sugar Factory

ಬಜೆಟ್‌ನಲ್ಲಿ ಮೈಷುಗರ್‌ಗೆ ಸಿಗುತ್ತಾ ಮುಕ್ತಿ !

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

“ಒಟಿಟಿ ಶೋ ಸೆನ್ಸಾರ್‌ ಅಗತ್ಯ’

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

Logo Ilustrations

ವಿಡಿಯೋ ಕಾಲ್ ಸೇವೆಯನ್ನು ಡೆಸ್ಕ್‌ ಟಾಪ್‌ಗೂ ವಿಸ್ತರಿದ ವಾಟ್ಸ್ ಆ್ಯಪ್

ನ್ಯೂಜಿಲೆಂಡ್‌ ನಲ್ಲಿ 7.1 ತೀವ್ರತೆಯ ಭೂಕಂಪ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ಪಿಲಿಕಜೆ ಗುಂಡ್ಯ ಸರಕಾರಿ ಶಾಲೆ ಮೇಲ್ದರ್ಜೆಗೆ ಬೇಡಿಕೆ

ಪಿಲಿಕಜೆ ಗುಂಡ್ಯ ಸರಕಾರಿ ಶಾಲೆ ಮೇಲ್ದರ್ಜೆಗೆ ಬೇಡಿಕೆ

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

ನಳ್ಳಿ  ತಿರುಗಿಸಿದರೆ ಬರೋದು ಬರಿ ಗಾಳಿ!

ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.