ಗೋವಾ : ಹಾಲುಣಿಸುವ ತಾಯಂದಿರಿಗೆ ಕೋವಿಡ್ ಲಸಿಕೆ ನೀಡಲು ರಾಜ್ಯ ಸರ್ಕಾರ ಆದ್ಯತೆ
Team Udayavani, May 25, 2021, 4:33 PM IST
ಪಣಜಿ: ಹಾಲುಣಿಸುವ ತಾಯಂದಿರಿಗೆ ಕೋವಿಡ್ ಲಸಿಕೆ ನೀಡಲು ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ. ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ಕೋವಿಡ್-19 ವ್ಯಾಕ್ಸಿನೇಶನ್‍ಗಾಗಿ ಹಾಲುಣಿಸುವ ಮಹಿಳೆಯರನ್ನು ಸೇರಿಸುವ ಯೋಜನೆಯನ್ನು ನಾವು ರೂಪಿಸುತ್ತಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಟೀಕಾ ಉತ್ಸವ 2.0 ಮೂಲಕ ರಾಜ್ಯದಲ್ಲಿನ 45 ವರ್ಷ ಮೇಲ್ಪಟ್ಟ ಎಲ್ಲರನ್ನೂ ನಾವು ತಲುಪಿ ಲಸಿಕೆ ಹಾಕಲಿದ್ದೇವೆ. ಮೇ 26 ರಿಂದ ಟೀಕಾ ಉತ್ಸವವು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳು ಮತ್ತು ಪುರಸಭೆಗಳಲ್ಲಿ ನಡೆಯಲಿದೆ. ನಾವು ಕಳೆದ ಬಾರಿ ರಾಜ್ಯದಲ್ಲಿ 168 ಸ್ಥಳಗಳಲ್ಲಿ ಟೀಕಾ ಉತ್ಸವ ಪ್ರಾರಂಭಿಸಿದ್ದೆವು, ಈಗ ನಾವು ಇನ್ನೂ ಹೆಚ್ಚಿನ ಸ್ಥಳಗಳ ಮೂಲಕ ಲಸಿಕೆ ನೀಡಲಿದ್ದೇವೆ ಎಂದು ಸಿಎಂ ಸಾವಂತ್ ಮಾಹಿತಿ ನೀಡಿದರು.
ಇದನ್ನೂ ಓದಿ : ಸ್ಟಾರ್ ನಟನ ಚಿತ್ರಕ್ಕೆ ನೋ ಎಂದ ‘ಉಪ್ಪೆನ’ ಬೆಡಗಿ ಕೃತಿ ಶೆಟ್ಟಿ
ಟೀಕಾ ಉತ್ಸವ 2.0 ದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಶೇ 40 ಪ್ರತಿಶತದಷ್ಟು ಜನರಿಗೆ ಮೊದಲ ವ್ಯಾಕ್ಸಿನೇಶನ್ ಡೋಸ್ ನೀಡುವ ಗುರಿ ಹೊಂದಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!