ನ್ಯೂಜೆರ್ಸಿಯಲ್ಲಿ ಸಿಗುತ್ತದೆ ಸಗಣಿಯ ಕಟ್ಟು; 215 ರೂ. ಮಾತ್ರ

Team Udayavani, Nov 18, 2019, 9:49 PM IST

ನವದೆಹಲಿ: ಅಮೆರಿಕದ ನ್ಯೂಜೆರ್ಸಿಯಲ್ಲಿ ಸಗಣಿ ಸಿಗುತ್ತದಾ ಎಂದು ಪ್ರಶ್ನೆ ಮಾಡುವರಿಗೆ ಉತ್ತರ ಇಲ್ಲಿದೆ.

ಖಂಡಿತಾ ಸಿಗುತ್ತದೆ. ಹತ್ತು ಸಗಣಿಯ ಕಟ್ಟುಗಳ ಪ್ಯಾಕೆಟ್‌ಗೆ 2.99 ಡಾಲರ್‌ ಅಂದರೆ 215 ರೂ. ಮಾತ್ರ. ಹೀಗಾಗಿ, ಭಾರತದ ದೇಸಿ ವಸ್ತುಗಳು ಎಂದು ಜನಪ್ರಿಯತೆ ಪಡೆದ ವಸ್ತುಗಳು ಅಮೆರಿಕದಲ್ಲಿಯೂ ಸಿಗುತ್ತದೆ. ಕೆಲ ಸಮಯದ ಹಿಂದೆ ಅಮೆಜಾನ್‌ ಗೆರಟೆಯನ್ನು ಚೆನ್ನಾಗಿ ಅಲಂಕರಿಸಿ 1,400 ರೂ.ಗಳಿಗೆ ಮಾರಾಟ ಮಾಡಿದ ವಿಚಾರ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಈ ಬಗ್ಗೆ ಸಮೀರ್‌ ಹಲರನ್ಕರ್‌ ಎಂಬವರು ಟ್ವೀಟ್‌ ಮಾಡಿದ್ದು ಸುದ್ದಿಯ ಮೂಲ. ಅವರ ಸಂಬಂಧಿ ನ್ಯೂಜೆರ್ಸಿಯಲ್ಲಿ ಸೆಗಣಿ ಖರೀದಿಸಿದ್ದ ಬಗ್ಗೆ ಟ್ವೀಟ್‌ ಮಾಡಿದ್ದರು. ಜತೆಗೆ ಆ ಪ್ಯಾಕೆಟ್‌ನಲ್ಲಿ “ಕೇವಲ ಧಾರ್ಮಿಕ ಬಳಕೆಗೆ ಮಾತ್ರ’ ಮತ್ತು “ತಿನ್ನುವುದಕ್ಕೆ ಅಲ್ಲ’ ಎಂದು ಸೂಚನೆ ಇರುವುದನ್ನೂ ಅವರು ಟ್ವೀಟ್‌ ಮಾಡಿದ್ದಾರೆ.

ಅವರು ಮಾಡಿದ ಟ್ವೀಟ್‌ ಮೈಕ್ರೋಬ್ಲಾಗಿಂಗ್‌ ಜಾಲತಾಣದಲ್ಲಿ ವೈರಲ್‌ ಆಗಿದೆ. “ಇದನ್ನು ನೋಡಿ ನಾನು ದಂಗ್‌ (DUNDG) ಆಗಿ ಹೋದೆ’ ಎಂದು ಹಾಸ್ಯ ಭರಿತವಾಗಿ ಬರೆದುಕೊಂಡವರಿದ್ದಾರೆ. ರಾಜೆನ್‌ ಎಂಬುವರು “ನಾಟ್‌ ಈಟೆಬಲ್‌’ ಎಂದು ಕಾಲೆಯುವ ಪ್ರಯತ್ನ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ