ಕಾಶ್ಮೀರ ಕಣಿವೆಯಲ್ಲಿ ಗಡಿಕಾಯುವ ಯೋಧನಿಗೆ ಬಂತು 1.5 ಕೋಟಿ ರೂ. ಕರೆಂಟ್ ಬಿಲ್ !
Team Udayavani, Aug 23, 2020, 4:40 PM IST
ಹೊಸದಿಲ್ಲಿ: ನಮ್ಮಲ್ಲಿ ಹಲವೆಡೆ ವಿದ್ಯುತ್ ಬಿಲ್ ಹೆಚ್ಚಳದಂತಹ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಸುದ್ದಿ ಕೇಳಿ. ಇದು ನಿಜಕ್ಕೂ ‘ಶಾಕಿಂಗ್’ ಸುದ್ದಿ. ಹೌದು ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಆರ್ ಪಿಎಫ್ ಜವಾನನಿಗೆ ಬರೋಬ್ಬರಿ 1.5 ಕೋಟಿ ರೂ ಕರೆಂಟ್ ಬಿಲ್ ನೀಡಲಾಗಿದೆ!
ಜಮ್ಮು ಕಾಶ್ಮೀರದ ಚರಾರೆ ಶರೀಫ್ ಎಂಬ ಯೋಧನ ಮನೆಗೆ ಇಷ್ಟೊಂದು ಪ್ರಮಾಣದ ವಿದ್ಯುತ್ ಬಿಲ್ ನೀಡಲಾಗಿದೆ. ಒಂದು ಕೋಟಿ 51 ಲಕ್ಷದ 59 ಸಾವಿರ 897 ರೂಪಾಯಿಗಳನ್ನು ಆಗಸ್ಟ್ 27ರ ಒಳಗೆ ಪಾವತಿಸಬೇಕು ಎಂದು ಸೂಚಿಸಲಾಗಿದೆ.
ಇಷ್ಟೊಂದು ಮೊತ್ತದ ಕರೆಂಟ್ ಬಿಲ್ ಅನ್ನು ಕಾಶ್ಮೀರ ಪೊಲೀಸರು ಪಾವತಿಸಿದೆ. ಇದು ಕ್ಲರಿಕಲ್ ತಪ್ಪಿನಿಂದ ಆದ ಘಟನೆಯೆಂದು ಮೇಲ್ನೊಟಕ್ಕೆ ತೋರುತ್ತದೆ. ಈ ಬಗ್ಗೆ ವಿವರಣೆಗಾಗಿ ನಾವು ವಿದ್ಯುತ್ ಶಕ್ತಿ ಇಲಾಖೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ವಾರಾಂತ್ಯವಾದ ಕಾರಣ ಸಾಧ್ಯವಾಗಲಿಲ್ಲ ಎಂದು ಸಿಆರ್ಪಿಎಫ್ ಎಡಿಜಿ ಜುಲ್ಫಿಕರ್ ಹಸನ್ ಹೇಳಿದ್ದಾರೆ.
ಅದೇ ಬಿಲ್ ಪ್ರತಿಯಲ್ಲಿ ಸೂಚಿಸಿರುವಂತೆ ಸಿಆರ್ ಪಿಎಫ್ ಬೆಟಾಲಿಯನ್ ಬಳಸಿರುವ ವಿದ್ಯುತ್ ಪ್ರಮಾಣ 50 ಕಿ. ವ್ಯಾಟ್ ಮಾತ್ರ. ಅದರ ಪ್ರಕಾರ 1500 ಮಾತ್ರ ಅವರು ಪಾವತಿಸಬೇಕು ಆದರೆ 1.5 ಕೋಟಿ ರೂ ಬಿಲ್ ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು