ಅಮರನಾಥ ಯಾತ್ರೆ ವೇಳೆ ಭದ್ರತೆಯೊಂದಿಗೆ ಸಿಆರ್‌ಪಿಎಫ್ ಪರಿಸರ ಉಳಿಸಿ ಆಂದೋಲನ

Team Udayavani, Jun 18, 2019, 3:20 PM IST

ಜಮ್ಮು : ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್‌ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯ ಯಾತ್ರೆಯ ವೇಳೆ ಯಾತ್ರಿಕರಿಗೆ ಭದ್ರತೆ ಒದಗಿಸುವ ತನ್ನ ಪ್ರಾಥಮಿಕ ಕರ್ತವ್ಯದೊಂದಿಗೆ ಸಿಆರ್‌ಪಿಎಫ್ ಈ ಬಾರಿ ಪರಿಸರ ಉಳಿಸಿ ಆಂದೋಲನವನ್ನು ಕೂಡ ಕೈಗೊಳ್ಳಲಿದೆ.

ಮುಂದಿನ ತಿಂಗಳ ಜು.1 ರಂದು ಆರಂಭವಾಗುವ ಪವಿತ್ರ ಅಮರನಾಥ ಪುಣ್ಯ ಕ್ಷೇತ್ರ ಯಾತ್ರೆಯು ಆಗಸ್ಟ್‌ 15ರಂದು ರಕ್ಷಾ ಬಂಧನ ದಿನದಂದು ಕೊನೆಗೊಳ್ಳಲಿದೆ.

46 ದಿನಗಳ ಈ ಯಾತ್ರೆ ಎರಡು ಮಾರ್ಗಗಳ ಮೂಲಕ ನಡೆಯುತ್ತದೆ. ಮೊದಲನೇಯದ್ದು ಅನಂತನಾಗ್‌ ಜಿಲ್ಲೆಯ ಸಾಂಪ್ರದಾಯಿಕ ಪಹಲ್‌ಗಾಂವ್‌ ಮೂಲಕ ಮತ್ತು ಇನ್ನೊಂದು ಕಡಿಮೆ ದೂರದ ಗುಂದೇರ್‌ಬಾಲ್‌ ಜಿಲ್ಲೆಯ ಬಾಲ್‌ತಾಲ್‌ ಮಾರ್ಗದ ಮೂಲಕ.

ವರ್ಷಂಪ್ರತಿಯ ಅಮರನಾಥ ಯಾತ್ರೆಗೆ ಸಿಆರ್‌ಪಿಎಫ್ ಮಾತ್ರವಲ್ಲದೆ ಸೇನೆ, ಸ್ಥಳೀಯ ಪೊಲೀಸ್‌ ಮತ್ತು ಇತರ ಭದ್ರತಾ ಪಡೆಗಳು ಕೂಡ ಯಾತ್ರಿಕರಿಗೆ ಭದ್ರತಾ ಸೇವೆ ನೀಡುತ್ತವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ