ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಎಚ್ಚರಿಕೆ

Team Udayavani, Oct 23, 2019, 6:13 PM IST

ಮುಂಬಯಿ: ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತದ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಶುಕ್ರವಾರ ಕರಾವಳಿ ಕರ್ನಾಟಕ, ಗೋವಾ, ಕೊಂಕಣ ಕಡಲತೀರಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಅಲ್ಲದೇ ಒಂದು ವೇಳೆ ಚಂಡಮಾರುತದ ಸಾಧ್ಯತೆಗಳು ತೀವ್ರಗೊಂಡಿದ್ದೇ ಆದಲ್ಲಿ ಅದು ಅ.23ರಿಂದ ನ.5ರ ವರೆಗಿನ ದಿನಗಳಲ್ಲಿ ಒಮಾನ್‌ ಅಥವಾ ಯೆಮೆನ್‌ ತೀರದತ್ತ ಸಾಗಲಿದೆ ಎಂದು ಊಹಿಸಲಾಗಿದೆ. ಉತ್ತರ ಭಾಗದಿಂದ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು, ಇದರಿಂದಾಗಿ ಈ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.
ಇದರೊಂದಿಗೆ ಮಳೆ ತುಸು ಉತ್ತರಕ್ಕೆ ಸಾಗುವ ಸಾಧ್ಯತೆಯಿದ್ದು, ಒಡಿಶಾ, ಆಂಧ್ರ ಕರಾವಳಿಯಲ್ಲೂ ಮಳೆ ಸಾಧ್ಯತೆಯನ್ನು ಹೇಳಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ