ಒಡಿಶಾ ಕರಾವಳಿಗೆ ಶುಕ್ರವಾರದೊಳಗೆ ಅಪ್ಪಳಿಸಲಿದೆ ವಿನಾಶಕಾರಿ ಫೊನಿ ಚಂಡಮಾರುತ
Team Udayavani, Apr 30, 2019, 3:34 PM IST
ಭುವನೇಶ್ವರ : ಅತ್ಯಂತ ಬಲಿಷ್ಠವಾಗಿ ತೀವ್ರ ಸ್ವರೂಪ ಪಡೆದಿರುವ ಫೊನಿ ಚಂಡಮಾರುತ, ಪುರಿ ಮತ್ತು ಕೇಂದ್ರಪಾರಾ ನಡುವಿನ ಒಡಿಶಾ ಕರಾವಳಿಗೆ ಶುಕ್ರವಾರದೊಳಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆದರೆ ಫೊನಿ ಚಂಡಮಾರುತ ಅಪ್ಪಳಿಸುವ ನಿರ್ದಿಷ್ಟ ಭೂತಾಣವನ್ನು ಭಾರತೀಯ ಹವಾಮಾನ ಇಲಾಖೆ ಇನ್ನಷ್ಟೇ ಪ್ರಕಟಿಸಬೇಕಿದೆ.
ಇಂದು ಮಧ್ಯಾಹ್ನ 12 ಗಂಟೆಯ ಐಎಂಡಿ ಬುಲೆಟಿನ್ ಪ್ರಕಾರ ಫೊನಿ ಚಂಡಮಾರುತವು ಆಗ್ನೇಯ ಮತ್ತು ಬಂಗಾಲ ಕೊಲಿಯ ನೈಋತ್ಯದಲ್ಲಿ, ಪುರಿಯಿಂದ ಸುಮಾರು 830 ಕಿ.ಮೀ. ದಕ್ಷಿಣದಲ್ಲಿ ಮತ್ತು ಆಂಧ್ರ ಪ್ರದೇಶದ ವಿಶಾಖಪಟ್ಟಣದ 670 ಕಿ.ಮೀ. ದಕ್ಷಿಣ-ಆಗ್ನೇಯದಲ್ಲಿ ಇದೆ.
ಐಎಂಡಿ ಅಂದಾಜಿಸಿರುವ ಪ್ರಕಾರ ಫೊನಿ ಚಂಡಮಾರುತ ಪುರಿ ಜಿಲ್ಲೆಯ ಶತಪಾದ ಅಥವಾ ಚಂದ್ರಭಾಗಾ ನಡುವಿನ ಪ್ರದೇಶದಲ್ಲಿ ಮತ್ತು ಕೇಂದ್ರಪಾರಾದ ಗುಪ್ತಿ ಯಲ್ಲಿ ಮೇ 3ರ ತಡ ರಾತ್ರಿ ನೆಲಕ್ಕಪ್ಪಳಿಸಲಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಬಿ ಪಿ ಸೇಥಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್