ತಿತ್ಲಿಗೆ ಎಂಟು ಬಲಿ


Team Udayavani, Oct 12, 2018, 6:00 AM IST

z-48.jpg

ಭುವನೇಶ್ವರ/ಹೈದರಾಬಾದ್‌:  ತಿತ್ಲಿ ಚಂಡಮಾರುತ ಒಡಿಶಾ ಕರಾವಳಿಗೆ ಗುರುವಾರ ಬೆಳಗ್ಗಿನ ಜಾವ ಅಪ್ಪಳಿಸಿದೆ. ಅದರ ಪರಿಣಾಮವಾಗಿ ಆಂಧ್ರ ಮತ್ತು ಒಡಿಶಾದಲ್ಲಿ ಧಾರಾಕಾರ ಮಳೆಯಾಗಿದೆ.  ಆಂಧ್ರಪ್ರದೇಶದಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ.  ಒಡಿಶಾದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಬುಧವಾರವೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವಿಪರೀತ ವೇಗದಿಂದ ಗಾಳಿ ಬೀಸುತ್ತಿದ್ದು, ಭಾರಿ ಮಳೆ ಸುರಿಯುತ್ತಿದೆ. ಆಂಧ್ರದ ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. ಚಂಡಮಾರುತದಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ಸಮುದ್ರಕ್ಕಿಳಿದಿದ್ದ ಆರು ಮೀನುಗಾರರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ ವಾಪಸಾಗಿಲ್ಲ. ಈ ಬಗ್ಗೆ ಶೋಧ ಕಾರ್ಯ ನಡೆದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಶ್ರೀಕಾಕುಳಂನಲ್ಲಿ ರಸ್ತೆ ಸಂಪರ್ಕ ಕಡಿಗೊಂಡಿದ್ದು, ಸುಮಾರು 2 ಸಾವಿರ ವಿದ್ಯುತ್‌ ಕಂಬಗಳು ಉರುಳಿವೆ.

ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಇಸ್ರೋ ಹಾಗೂ ಇತರ ಏಜೆನ್ಸಿಗಳಿಂದ ಮಾಹಿತಿಯನ್ನು ಪಡೆದು ಸೂಕ್ತ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನೂ ಅವರು ವಹಿಸಿದ್ದಾರೆ. ಗುರುವಾರ ಬೆಳಗೆ 5.30ಕ್ಕೆ ಚಂಡಮಾರುತ ಆಂಧ್ರ ಕರಾವಳಿಯನ್ನು ದಾಟಿ ಸಾಗಿದ್ದು, ಬೆಳಗ್ಗೆ 8 ಗಂಟೆಗೆ ನಿಯಂತ್ರಣಕ್ಕೆ ಬಂದಿದೆ. ಒಡಿಶಾದ ಗೋಪಾಲಪುರಕ್ಕೆ ಬಡಿದ ಚಂಡಮಾರುತದ ವೇಗ ಗಂಟೆಗೆ 126 ಕಿ.ಮೀ ವರೆಗೂ ಇತ್ತು.

ಒಡಿಶಾದಲ್ಲಿ ಭಾರಿ ಮಳೆ: ಇನ್ನೊಂದೆಡೆ ಒಡಿಶಾದಲ್ಲಿ ಚಂಡಮಾರುತದಿಂದ ಯಾರೂ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ. ಗಂಜಂ ಹಾಗೂ ಗಜಪತಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ. ಗಂಜಂ, ಗಜಪತಿ ಹಾಗೂ ಪುರಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ವಿದ್ಯುತ್‌ ವ್ಯತ್ಯಯ ಹಾಗೂ ಟೆಲಿಕಾಂ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಒಟ್ಟು ಎಂಟು ಜಿಲ್ಲೆಗಳು ತಿತ್ಲಿ ಚಂಡಮಾರುತದಿಂದ ಬಾಧಿತವಾಗಿವೆ.

ಆದರೆ ಯಾವುದೇ ಗಂಭೀರ ಪ್ರಮಾಣದ ಹಾನಿ ಒಡಿಶಾದಲ್ಲಿ ಆಗಿರುವುದು ವರದಿಯಾಗಿಲ್ಲ. ವಿದ್ಯುತ್‌ ಕಂಬಗಳು ಉರುಳಿದ್ದು, ಅವುಗಳ ಸರಿಪಡಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನೊಂದೆಡೆ, ರಸ್ತೆಯ ಮೇಲೆ ಮರಗಳು ಬಿದ್ದಿದ್ದು, ಇವುಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.  ಒಡಿಶಾದಲ್ಲಿ 13 ಎನ್‌ಡಿಆರ್‌ಎಫ್ ಮತ್ತು 9 ಒಡಿಆರ್‌ಎಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದಲ್ಲೂ ಕಾಣಿಸಿಕೊಂಡಿದ್ದು, ರಾಜ್ಯದ ದಕ್ಷಿಣಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಪ್ರಭಾವದಿಂದ ಗುರುವಾರ ತಡರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. 

ಪ್ಲೋರಿಡಾದಲ್ಲಿ ಸುಂಟರಗಾಳಿ
ಅಮೆರಿಕದ ಫ್ಲೋರಿಡಾದಲ್ಲಿ ಮಿಶೆಲ್‌ ಸುಂಟರಗಾಳಿ ಅಟ್ಟಹಾಸ ಮೆರೆದಿದೆ. ಗಂಟೆಗೆ 250 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಇದು ಈ ಭಾಗದಲ್ಲಿ ನೂರಕ್ಕೂ ಹೆಚ್ಚು ವರ್ಷ ಗಳಿಂದೀಚೆಗೆ ಬೀಸಿದ ಭೀಕರ ಸುಂಟರಗಾಳಿ ಎಂದು ಹೇಳಲಾಗಿದೆ. ಚಂಡಮಾರುತ ದೊಟ್ಟಿಗೆ ಸುರಿದ ವಿಪರೀತ ಮಳೆಯಿಂದಾಗಿ ರಸ್ತೆಗಳು ಮುಳುಗಿವೆ. ಪನಾಮಾ ನಗರದಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ.

ಟಾಪ್ ನ್ಯೂಸ್

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?

gadang-rakkamma

ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಯಶೋವರ್ಮ ನಿಧನ

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಯಶೋವರ್ಮ ನಿಧನ

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ: ಮೀನುಗಾರರ ರಕ್ಷಣೆ

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ: ಮೀನುಗಾರರ ರಕ್ಷಣೆ

thumbnail 2

ನೆಲಸಮವಾದ ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ: ಸದ್ಗುರು

thumb 1

ಪ್ರಧಾನಿ ಮೋದಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಜಪಾನಿನ ಮಕ್ಕಳು; ವಿಡಿಯೋ

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು

ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್‌ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumbnail 2

ನೆಲಸಮವಾದ ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ: ಸದ್ಗುರು

thumb 5

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ಕುತುಬ್‌ ಮಿನಾರ್‌ ಉತ್ಖನನಕ್ಕೆ ಆದೇಶಿಸಿಲ್ಲ! ಸಚಿವ ಜಿ.ಕೆ.ರೆಡ್ಡಿ ಸ್ಪಷ್ಟನೆ 

ಕುತುಬ್‌ ಮಿನಾರ್‌ ಉತ್ಖನನಕ್ಕೆ ಆದೇಶಿಸಿಲ್ಲ! ಸಚಿವ ಜಿ.ಕೆ.ರೆಡ್ಡಿ ಸ್ಪಷ್ಟನೆ 

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

kaikamba

ಅಭಿವೃದ್ಧಿ ಕಾಮಗಾರಿ ಪೂರ್ಣ; ಮೇ 24ರಂದು ಉದ್ಘಾಟನೆ

Watch: ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಜಪಾನ್ ಮಕ್ಕಳ ಹಿಂದಿ ಸಂಭಾಷಣೆಯ ವಿಡಿಯೋ ವೈರಲ್

Watch: ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಜಪಾನ್ ಮಕ್ಕಳ ಹಿಂದಿ ಸಂಭಾಷಣೆಯ ವಿಡಿಯೋ ವೈರಲ್

tree

ಹೆದ್ದಾರಿ ಅಭಿವೃದ್ಧಿ: ಮರಗಳ ತೆರವಿಗೆ ಕ್ಷಣಗಣನೆ

3

ಮನೆ ಮನೆಗಳಲ್ಲಿ ಕುಂಬಾರಿಕೆಗೆ ಹೆಜ್ಜೆ

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.