Udayavni Special

ಅಧಿಕಾರಕ್ಕೆ ಜೋತು ಬಿದ್ದವರಿಂದ ಗೊಂದಲ : ಸಂಸದ ಡಿ.ಕೆ. ಸುರೇಶ್


Team Udayavani, Jun 23, 2021, 6:00 PM IST

d-k-suresh-statement-on-cm-seat

ಬೆಂಗಳೂರು :  ನಿಜವಾದ ಕಾಂಗ್ರೆಸ್ಸಿಗರು, ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆಯತ್ತ ಗಮನಹರಿಸುತ್ತಾರೆ. ಅವರು ಪಕ್ಷದ ಶಿಸ್ತು ಕಲಿತಿರುತ್ತಾರೆ. ಆದರೆ ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದಿರುವವರು, ಅಧಿಕಾರಕ್ಕೆ ಜೋತು ಬಿದ್ದಿರುವವರು ಹೀಗೆಲ್ಲಾ ಮಾತನಾಡಿ, ಗೊಂದಲ ಸೃಷ್ಟಿಸುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಶಿಸ್ತು, ಅಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಪಕ್ಷದ ಹೈಕಮಾಂಡ್ ಗೆ ಸೇರಿದ್ದರು. ವರಿಷ್ಠರು ಅದನ್ನು ನೋಡಿಕೊಳ್ಳುತ್ತಾರೆ.

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುತ್ತಿರುವವರಿಗೆ ಒಳ್ಳೆಯದಾಗಲಿ. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲ. ಸಿಎಂ ಸ್ಥಾನ ಕಾಲಿಯೂ ಇಲ್ಲ. ಕಾಂಗ್ರೆಸ್ ನ ಈಗಿನ ಶಾಸಕರು ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. 2023 ಕ್ಕೆ ಚುನಾವಣೆ ಇದೆ. ಚುನಾವಣೆ ಗೆಲ್ಲುವ ಬಗ್ಗೆ ಶಾಸಕರು ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ನಾವು ಭಾವಿಸಿದ್ದೇವೆ. ಕೆಲವರು ಈಗಲೇ ಮುಖ್ಯಮಂತ್ರಿ ಆಗುವುದಾದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ.

ಇದನ್ನೂ ಓದಿ : ಉತ್ತರ ಪ್ರದೇಶದ ಕಾಂಗ್ರೆಸ್ ಗೆ ಪ್ರಿಯಾಂಕ ಅವರದ್ಧೇ ನೇತೃತ್ವ : ಸಲ್ಮಾನ್‌ ಖುರ್ಷಿದ್‌

ಅದು ಶಾಸಕರ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯವಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಅವರ ವೈಯಕ್ತಿಕ ಅಭಿಪ್ರಾಯ ಹೇಳಬಹುದು, ನಾನು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಬಹುದು. ಆದರೆ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕಲ್ಲ, ಅದು ಮುಖ್ಯ ಎಂದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಶಾಸಕರ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಸುರೇಶ್ ಅವರು, ‘ಚುನಾವಣೆ ನೇತೃತ್ವದ ಬಗ್ಗೆ ಚರ್ಚೆ ಮಾಡಲು ಸಮಯ ಬಹಳ ದೂರವಿದೆ. ಈಗ ಕರೋನಾ ಇದ್ದು, ಅದನ್ನು ನಿಭಾಯಿಸಲು ಏನು ಮಾಡಬೇಕು ಎಂಬುದನ್ನು ಅವರು ಹೇಳಬೇಕು ಎಂದು ತಿಳಿಸಿದ್ದಾರೆ.

ಇನ್ನು, ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿದರು ಎಂಬಂತೆ, ವಿರೋಧ ಪಕ್ಷದವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುತ್ತಿರಲು ಕಾರಣ ಏನು? ಇದು ಗೊಂದಲ ಸೃಷ್ಟಿಸುವುದಿಲ್ಲವೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅವರು, ‘ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ, ಹೀಗಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ವಿರೋಧ ಪಕ್ಷದ ಶಾಸಕರಂತೆ ಕೆಲಸ ಮಾಡಬೇಕಿದೆ. ಅವರ ಹೇಳಿಕೆಗಳು ಬರೀ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಗೊಂದಲ ಉಂಟು ಮಾಡುತ್ತದೆ. ಕೆಲವರು ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮನಸ್ಥಿತಿ ಉಳ್ಳವರು. ನಿಜವಾದ ಕಾಂಗ್ರೆಸ್ ನಾಯಕರಾರೂ ಈ ರೀತಿ ಮಾತನಾಡುವುದಿಲ್ಲ, ಅನಗತ್ಯ ಭಾವನೆ ವ್ಯಕ್ತಪಡಿಸುವುದಿಲ್ಲ. ಅವರು ಕಾಂಗ್ರೆಸ್ ಶಿಸ್ತನ್ನು ಕಲಿತಿರುತ್ತಾರೆ. ಅಧಿಕಾರಕ್ಕಾಗಿಯೇ ಕಾಂಗ್ರೆಸ್ ಗೆ ಬಂದವರನ್ನು, ಅದಕ್ಕೆ ಜೋತು ಬಿದ್ದವರನ್ನು ಯಾರು, ಏನೂ ಮಾಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

ಅಶಿಸ್ತು ತೋರಿದವರಿಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಶಿಸ್ತು, ಅಶಿಸ್ತಿನ ವಿಚಾರವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ. ಯಾರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೋ ಅವರು ಅಶಿಸ್ತನ್ನು ಅಭ್ಯಾಸ ಮಾಡಿಕೊಂಡಿದ್ದು, ನಿಜವಾದ ಕಾಂಗ್ರೆಸಿಗರು ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿದ್ದಾರೆ’ ಎಂದರು.

ಶಾಸಕಾಂಗ ಪಕ್ಷದ ನಾಯಕರು ಇದನ್ನು ನಿಯಂತ್ರಿಸಬೇಹುದಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, ‘ನಾನು ಆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು, ಪಕ್ಷದ ರಾಜ್ಯ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ನೇಮಕವಾಗಿದ್ದಾರೆ. ಅವರಿಬ್ಬರೂ ಅವರವರ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯದಲ್ಲಿರುವವರಿಗೆ ಏನು ಕೆಲಸ? ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕಾದ ಜವಾಬ್ದಾರಿ ಇದೆ. ಕರೋನಾ ಸಮಯದಲ್ಲಿ ಆಡಳಿತ ಪಕ್ಷದ ವೈಫಲ್ಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಸಿಎಂ ಹುದ್ದೆ ಸೇರಿ ಸದ್ಯಕ್ಕೆ ಯಾವುದೇ ಸ್ಥಾನ ಖಾಲಿ ಇಲ್ಲ. ಖಾಲಿ ಆದಾಗ ಯಾರ್ಯಾರು ಚರ್ಚೆಗೆ ಬರುತ್ತಾರೋ ಅವರಿಗೆಲ್ಲ ಆಗ ಸವಾಲು ಮಾಡೋಣ’ ಎಂದರು.

ಇದನ್ನೂ ಓದಿ :  ಪ್ರಧಾನ್ ಮಂತ್ರಿ ಜನ ಧನ್ ಖಾತೆ ಹೇಗೆ ತೆರೆಯುವುದೆಂದು ನಿಮಗೆ ಗೊತ್ತೇ..? ಇಲ್ಲಿದೆ ಮಾಹಿತಿ

ಟಾಪ್ ನ್ಯೂಸ್

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

hfgjfyhgdf

ಶುಕ್ರವಾರ ಸಂಪುಟ ವಿಸ್ತರಣೆ ಸಾಧ್ಯತೆ : ದೆಹಲಿಗೆ ತೆರಳಲು ಕಾಲಾವಕಾಶ ಕೇಳಿದ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

Govt closely monitoring situation in Kishtwar, Kargil following cloudbursts: PM Modi

ಜಮ್ಮು ಕಾಶ್ಮೀರ ಮೇಘ ಸ್ಪೋಟ : ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ : ಪ್ರಧಾನಿ

mamata-banerjee-in-delhi-pitches-for-opposition-unity-says-country-will-lead-we-will-follow

ಪ್ರತಿಪಕ್ಷಗಳ ಒಕ್ಕೂಟ ರಚನೆಯಾಗುತ್ತದೆ, ದೇಶವೇ ಒಕ್ಕೂಟದ ನೇತೃತ್ವ ವಹಿಸುತ್ತದೆ : ದೀದಿ

Congress alleges Covid testing scam in Madhya Pradesh, says govt used kits not approved by ICMR

ಕೋವಿಡ್ ಹೆಸರಿನಲ್ಲಿ ಶಿವರಾಜ್ ನೇತೃತ್ವದ ಸರ್ಕಾರದಿಂದ ಬ್ರಹ್ಮಾಂಡ ಭ್ರಷ್ಟಾಚಾರ : ಕಾಂಗ್ರೆಸ್

ಕೋವಿಡ್ ಹೆಚ್ಚಳ ಕಳವಳಕಾರಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 43,654 ಪ್ರಕರಣ ಪತ್ತೆ

ಕೋವಿಡ್ ಹೆಚ್ಚಳ ಕಳವಳಕಾರಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 43,654 ಪ್ರಕರಣ ಪತ್ತೆ

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

sdfghdyhdgthdgh

ಕಾಪು : ಜಾತ್ರೆಯಿಲ್ಲದೇ ಸಾಂಪ್ರದಾಯಿಕ ಪೂಜೆ, ಹರಕೆ ಸಮರ್ಪಣೆಗೆ ಸೀಮಿತಗೊಂಡ ಆಟಿ ಮಾರಿಪೂಜೆ

ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

ಆರೋಗ್ಯದ ಮೇಲೆ ಪರಿಣಾಮ…ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಬೇಡಿ

fsgfguhjggf

ಯಡಿಯೂರಪ್ಪ ಕಣ್ಣೀರಿನ ಬಗ್ಗೆ ಬಹಿರಂಗಪಡಿಸಲಿ : ಡಿ.ಕೆ ಶಿವಕುಮಾರ್

dgfhgfhgffs

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.