ದಲೈ ಲಾಮಾ ಗಡ್ಡ ಎಳೆಯೋದು ಯಾಕೆ? ಬಾಬಾ ದಾಡಿಗೂ ಕೈ
Team Udayavani, Aug 14, 2017, 4:42 PM IST
ಮುಂಬೈ: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಸದಾ ಹಸನ್ಮುಖಿ. ತಮ್ಮನ್ನು ಭೇಟಿಯಾಗಲು ಬಂದವರನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ಮಾತನಾಡಿಸುವ ಅವರ ಗುಣ ಜಗತ್ಪ್ರಸಿದ್ಧ. ಆದರೆ ದಲೈ ಲಾಮಾರ ಇನ್ನೊಂದು ಗುಣದ ಪರಿಚಯ ಜಗತ್ತಿಗೆ ಅಷ್ಟಾಗಿ ಇಲ್ಲ. ಅವರಿಗೆ ದಾಡಿ ಕಂಡರೆ ವಿಪರೀತ ಪ್ರೀತಿ! ಗಡ್ಡ ಬಿಟ್ಟವರು ಯಾರೇ ಇರಲಿ, ಅವರು ಚಿಕ್ಕ ಮಕ್ಕಳಂತೆ ನಗುತ್ತಾ ದಾಡಿ ಎಳೆದೇ ಬಿಡುತ್ತಾರೆ.
ಮುಂಬೈನಲ್ಲಿ ಭಾನುವಾರ ನಡೆದ ಶಾಂತಿ ಮತ್ತು ಸಾಮರಸ್ಯ ಸಮಾವೇಶದಲ್ಲೂ ದಲೈ ಲಾಮಾರ ದಾಡಿ ಪ್ರೇಮ ಮತ್ತೂಮ್ಮೆ ಜಾಹೀರಾಯಿತು. ತಮ್ಮ ಪಕ್ಕ ಕುಳಿತ ಯೋಗಗುರು ಬಾಬಾ ರಾಮ್ದೇವ್ ಅವರ ದಾಡಿ ಜಗ್ಗಿದ್ದಾರೆ ಈ ಬೌದ್ಧ ಗುರು. ರಾಮ್ದೇವ್ ಅವರಿಗೆ ದಲೈ ಲಾಮಾ ಹೀಗೆ ಮಾಡಿದ್ದು ಈ ಮೊದಲೇನೂ ಅಲ್ಲವಾದ್ದರಿಂದ, ಅವರೂ ಈ ಪ್ರೀತಿಯನ್ನು ಮತ್ತೂಮ್ಮೆ ಖುಷಿಯಿಂದಲೇ ಸ್ವೀಕರಿಸಿದ್ದಾರೆ.
ಅಷ್ಟೇ ಅಲ್ಲ, ಸ್ವಲ್ಪ ಹೊತ್ತು ಬಿಟ್ಟು ಬಾಬಾ ರಾಮ್ದೇವ್ ಅವರು ದಲೈ ಲಾಮಾ ಅವರ ಮಡಿಲಲ್ಲಿ ಮಗುವಿನಂತೆ ತಲೆ ಆನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದಲೈ ಲಾಮಾ ರಾಮ್ದೇವ್ ಅವರಿಗೆ ಕಚಗುಳಿ ಇಟ್ಟು ನಗಿಸಿದ್ದಾರೆ. ಇವರಿಬ್ಬರು ಇಂಥ ಆತ್ಮೀಯ ಕ್ಷಣಗಳನ್ನು ನೋಡಿದ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ