ದಂಗಲ್ ನಟಿ ಜೈರಾಗೆ ವಿಮಾನದಲ್ಲಿ ಕಿರುಕುಳ
Team Udayavani, Dec 11, 2017, 7:00 AM IST
ಮುಂಬೈ: ಬಾಲಿವುಡ್ನ “ದಂಗಲ್’ ಹಾಗೂ ಇತ್ತೀಚಿನ “ಸೀಕ್ರೆಟ್ ಸೂಪರ್ಸ್ಟಾರ್’ ಚಿತ್ರದಲ್ಲಿ ನಟಿಸಿರುವ ಜೈರಾ ವಾಸಿಂ ಅವರು ಶನಿವಾರ ರಾತ್ರಿ ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆಂದು ದೂರಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಅವರು, “”ತಮ್ಮ ಹಿಂದಿನ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ತಮ್ಮ ಆಸನದ ಆರ್ಮ್ ರೆಸ್ಟ್ ಮೇಲೆ ತನ್ನ ಪಾದವಿರಿಸಿ ಕುಳಿತಿದ್ದ. ಇದನ್ನು ಹೇಗೋ ಸಹಿಸಿಕೊಂಡರೂ ಆನಂತರ ವಿಮಾನದಲ್ಲಿ ಬೆಳಕು ಮಾಯವಾದ ಮೇಲೆ, ಪಾದದ ಮುಂಭಾಗದಿಂದ ನನ್ನ ಭುಜ, ಕುತ್ತಿಗೆ, ಬೆನ್ನು ಸವರಲಾರಂಭಿಸಿದ. ಮಂದ ಬೆಳಕಿನಿಂದಾಗಿ ಆತನ ಕಿರುಕುಳವನ್ನು ಮೊಬೈಲಿನಲ್ಲಿ ದಾಖಲಿಸಲಾಗಲಿಲ್ಲ” ಎಂದಿದ್ದಾರೆ.
ಬಳಿಕ ಜೈರಾ, ಇನ್ಸ್ಟಾಗ್ರಾಂನಲ್ಲಿ ಲೈವ್ ವಿಡಿಯೋ ಮೂಲಕ ಈ ವಿಚಾರ ತಿಳಿಸಿದ್ದಾರೆ.
ಜೈರಾಳ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಹಿಳಾ ಆಯೋಗವು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮೂಲಕ ಪ್ರಕರಣದ ತನಿಖೆ ಮಾಡಿಸುವುದಾಗಿ ಹೇಳಿದೆ. ರಾಷ್ಟ್ರೀಯ ಮಹಿಳಾ ಆಯೋಗ ವಿಮಾನ ಸಂಸ್ಥೆ “ವಿಸ್ತಾರ’ಕ್ಕೆ ಹಾಗೂ ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದು ಪ್ರಕರಣ ತನಿಖೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು