ಭಾರತದಲ್ಲೇ ಡೇಟಾ ಬ್ಯಾಂಕ್
ವಾಟ್ಸ್‌ಆ್ಯಪ್ ಪಾವತಿ ಬ್ಯಾಂಕ್ ಶೀಘ್ರವೇ ಶುರು ಸಾಧ್ಯತೆ
Team Udayavani, Jun 28, 2019, 5:15 AM IST
ಹೊಸದಿಲ್ಲಿ: ಭಾರತೀಯರ ಹಣಕಾಸಿನ ಮಾಹಿತಿಗಳನ್ನು ದೇಶದಲ್ಲೇ ಸಂಗ್ರಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿರುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್ ತನ್ನ ಪೇಮೆಂಟ್ ಸೇವೆಯ ಎಲ್ಲ ಡೇಟಾವನ್ನೂ ಭಾರತದಲ್ಲೇ ಸಂಗ್ರಹಿಸಲು ನಿರ್ಧರಿಸಿದೆ. ಶೀಘ್ರವೇ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ ಆ್ಯಪ್ ಪೇಮೆಂಟ್ ಬ್ಯುಸಿನೆಸ್ ಅನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಶುರು ಮಾಡಲಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಇದರಿಂದಾಗಿ ಆರ್‌ಬಿಐ ನೀತಿಗೆ ಮಹತ್ವದ ಜಯ ಸಿಕ್ಕಂತಾಗಿದೆ. ಆದರೆ, ವಿದೇಶಿ ಕಂಪೆನಿಗಳು ಈ ಬಗ್ಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದವು. ಈಗಾಗಲೇ ವಾಟ್ಸ್‌ಆ್ಯಪ್ ತನ್ನ ಪೇಮೆಂಟ್ ಸರ್ವೀಸ್‌ಗಾಗಿ ಐಸಿಐಸಿಐ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಎಸ್‌ಬಿಐ ಮೂಲಕವೂ ಈ ಸೇವೆ ಸಿಗಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕಳೆದ ಫೆಬ್ರವರಿಯಲ್ಲೇ ಈ ಸೇವೆಯನ್ನು ಬಿಡು ಗಡೆಗೊಳಿಸಲು ನಿರ್ಧರಿಸಲಾಗಿ ತ್ತಾದರೂ ಹಲವು ಕಾರಣಗಳಿಂದ ಮುಂದೂಡಿತ್ತು. ಇದೇ ಸಮಯದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ಇತರ ವಿವಾದಗಳು ಎದ್ದಿದ್ದವು.
ಆರ್‌ಬಿಐ ನಿಯಮದ ಪ್ರಕಾರ ಕಂಪೆನಿ ಗಳು ಮೊದಲು ಭಾರತದಲ್ಲಿ ಡೇಟಾ ಸಂಗ್ರಹ ಘಟಕವನ್ನು ಸ್ಥಾಪಿಸಬೇಕು. ನಂತರ ಇದಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿಯನ್ನು ಆರ್‌ಬಿಐಗೆ ಕಂಪೆನಿಯು ಸಲ್ಲಿಸಬೇಕು. ಕೇವಲ ನೋಂದಾಯಿತ ಆಡಿಟರ್‌ಗಳು ಡೇಟಾ ಸಂಗ್ರಹ ಘಟಕದ ಆಡಿಟ್ ನಡೆಸ ಬೇಕಿದೆ. ಈ ವರದಿಯನ್ನು ಆರ್‌ಬಿಐ ಪರಿಶೀ ಲಿಸಿದ ನಂತರವೇ ಕಂಪೆನಿಯೊಂದು ಪಾವತಿ ಸೌಲಭ್ಯವನ್ನು ಜನರ ಬಳಕೆಗೆ ಒದಗಿಸ ಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
MUST WATCH
ಹೊಸ ಸೇರ್ಪಡೆ
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !