ನ.14ಕ್ಕೆ ದಾವೂದ್ ಆಸ್ತಿ ಹರಾಜು; ಎಷ್ಟಿದೆ ಗೊತ್ತಾ ?
Team Udayavani, Oct 20, 2017, 1:08 PM IST
ಮುಂಬಯಿ: ವಸೂಲಿ ಪ್ರಕರಣವೊಂದ ರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನನ್ನು ಬಂಧಿಸಿರು ವಂತೆಯೇ ಕೇಂದ್ರ ಹಣಕಾಸು ಇಲಾಖೆ ಮುಂಬಯಿ ಮತ್ತು ಔರಂಗಾಬಾದ್ನಲ್ಲಿರುವ ದಾವೂದ್ನ ಆಸ್ತಿ ಹರಾಜಿಗೆ ಮುಂದಾಗಿದೆ. ಈಗಾಗಲೇ ಈ ಕುರಿತು ನೋಟಿಸ್ ಜಾರಿಯಾಗಿದ್ದು, ನ.14ರಂದು ಈ ಹರಾಜು ನಡೆಯಲಿದೆ. ಹರಾಜಿನ ಮೂಲ ದರ ಒಟ್ಟು 5.54 ಕೋಟಿ ರೂ. ಎಂದು ನಿಗದಿ ಮಾಡಲಾಗಿದೆ.
ದೇಶದಲ್ಲಿ ಆತನ ವಹಿವಾಟಿನ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಹರಾಜು ಹಾಕಲು ಮುಂದಾಗಿರುವ ಆಸ್ತಿಯ ಪೈಕಿ ಸದ್ಯ ಜೈಲಲ್ಲಿರುವ ಇಕ್ಬಾಲ್ ಕಸ್ಕರ್ ವಾಸಿಸುತ್ತಿದ್ದ ಮುಂಬಯಿಯ ದಮರ್ವಾಲಾ ಬಿಲ್ಡಿಂಗ್ನಲ್ಲಿರುವ ಫ್ಲ್ಯಾಟ್ ಸಂಖ್ಯೆ 18-20, 25-26 ಮತ್ತು 28 ಒಳಗೊಂಡಿದೆ. ಜತೆಗೆ ಪಾಕ್ವೊಡಿಯಾ ರಸ್ತೆಯಲ್ಲಿರುವ ಭೂಗತ ಪಾತಕಿಯ ಸಹೋದರಿ ಹಸೀನಾ ಪಾರ್ಕರ್ನ ಮನೆಯೂ ಸೇರಿದೆ.
ಹರಾಜಾಗಲಿರುವ ಆಸ್ತಿ ಮತ್ತು ಮೌಲ್ಯ
92.69 ಲಕ್ಷ ರೂ. ಮಡ್ಗಾಂವ್ ನಲ್ಲಿರುವ ಫ್ಲ್ಯಾಟ್
1.21 ಕೋಟಿ ರೂ. ಶಬ್ನಮ್ ಗೆಸ್ಟ್ ಹೌಸ್
1.55 ಕೋಟಿ ರೂ. ದಮರ್ವಾಲಾ ಬಿಲ್ಡಿಂಗ್
1.18 ಕೋಟಿ ರೂ. ಹೋಟೆಲ್ ರೌನಾಕ್ ಅಫ್ರೋಜ್
65.9 ಲಕ್ಷ ರೂ. ದಾದ್ರಿವಾಲಾ ಚೌಲ್
1.02 ಲಕ್ಷ ರೂ. ಔರಂಗಾಬಾದ್ನ ಲ್ಲಿರುವ ಕಾರ್ಖಾನೆ ಜಮೀನು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA