60 ಲಕ್ಷದ ಡ್ರಗ್ಸ್‌ನೊಂದಿಗೆ ಈರ್ವರನ್ನು ಬಂಧಿಸಿದ ದಯಾ ತಂಡ


Team Udayavani, Jan 2, 2018, 11:29 AM IST

45.jpg

ಮುಂಬಯಿ: ಪೊಲೀಸ್‌ ಇನ್ಸ್‌ಪೆಕ್ಟರ್‌ ದಯಾ ನಾಯಕ್‌ ನೇತೃತ್ವದ ತಂಡವು ಜೋಗೇಶ್ವರಿ ಪ್ರದೇಶದಲ್ಲಿ ಸುಮಾರು 60 ಲ. ರೂ. ಮೌಲ್ಯದ ಕನಿಷ್ಠ 3 ಕೆ.ಜಿ. ಮೆಫೆಡ್ರೋನ್‌ ಅಥವಾ ಮಿಯಾವ್‌ ಮಿಯಾವ್‌ (ಎಂಡಿಎಂಎ) ಡ್ರಗ್ಸ್‌ನೊಂದಿಗೆ ಈರ್ವರು ವ್ಯಕ್ತಿಗಳನ್ನು ಬಂಧಿಸಿದೆ.  ಬಂಧಿತರನ್ನು ಅಹ್ಮದ್‌ ಹುಸೇನ್‌ ಮತ್ತು ಆಸಿಫ್‌ ಖುರೇಶಿ ಎಂದು ಗುರುತಿಸಲಾಗಿದ್ದು,  ಈ ಮಾದಕ ಪದಾರ್ಥಗಳನ್ನು ಅವರು ಥರ್ಟಿ ಫಸ್ಟ್‌ ನೈಟ್‌ ಪಾರ್ಟಿಗಳಿಗೆ ಪೂರೈಕೆ ಮಾಡಲು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಪೊಲೀಸರು ಬಂಧಿತರ ಗ್ರಾಹಕರನ್ನು ಪತ್ತೆ ಮಾಡಲು ಅವರ ವಿಚಾರಣೆ ನಡೆಸುತ್ತಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ನಗರದೊಳಗೆ ಭಾರೀ ಪ್ರಮಾಣದಲ್ಲಿ ಪಾರ್ಟಿ ಡ್ರಗ್ಸ್‌ಗಳನ್ನು ತರಿಸಲಾಗುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ತನಿಖಾ ಅಧಿಕಾರಿ ದಯಾ ನಾಯಕ್‌ ನೇತೃತ್ವದ ತಂಡವು ರವಿವಾರ ಬಲೆ ಬೀಸಿ ಈ ಈರ್ವರು ವ್ಯಕ್ತಿಗಳನ್ನು ಬಂಧಿಸಿದೆ.

ಪೊಲೀಸ್‌ ತಂಡವು ರಾತ್ರಿ ಜೋಗೇಶ್ವರಿ(ಪ)ಯಲ್ಲಿ ಬಲೆ ಬೀಸಿದಾಗ,ಅಲ್ಲಿ ಖುರೇಶಿ ವ್ಯಕ್ತಿಯೋರ್ವನಿಗಾಗಿ ಕಾಯುತ್ತಿರುವುದು ಕಂಡುಬಂತು. ತಂಡವು ಆತನ ಮೇಲೆ ನಿಗಾ ಇಟ್ಟಾಗ, ಓರ್ವ ದ್ವಿಚಕ್ರ ವಾಹನ ಸವಾರ (ಹುಸೇನ್‌) ಖುರೇಶಿ ಬಳಿಗೆ ಬಂದ. ಹುಸೇನ್‌ ಕೋಡ್‌ ವರ್ಡ್‌ನಲ್ಲಿ ಖುರೇಶಿಯೊಂದಿಗೆ ಡ್ರಗ್ಸ್‌ ಡೀಲ್‌ ಮಾಡುತ್ತಿದ್ದಾಗ, ಪೊಲೀಸ್‌ ತಂಡವು ಅವರನ್ನು ಬಂಧಿಸಿತು. 

ಈ ಸಂದರ್ಭ ಖುರೇಶಿ ಬಳಿಯಿಂದ 3 ಕೆ.ಜಿ.ಪಾರ್ಟಿ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದ್ದು, ಆತನ ಪೂರೈಕೆದಾರನ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

17banana

ಶಾಲೆಗಳಲ್ಲಿ ಮೊಟ್ಟೆ ವಿತರಿಸದಂತೆ ಬಸವ ಧರ್ಮ ಮಠಾಧೀಶರ ಹೇಳಿಕೆಗೆ ಖಂಡನೆ

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

15-crocodile

ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

11–sdsd

ಅಮೇಥಿಯ ಅಭಿವೃದ್ಧಿ ಪ್ರಸ್ತಾಪವೇ ಇಲ್ಲ : ರಾಹುಲ್ ಗೆ ಸ್ಮೃತಿ ಟಾಂಗ್

ashwin

ಮುಂಬೈ ಟೆಸ್ಟ್: ಅನಿಲ್ ಕುಂಬ್ಳೆ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

13fund

ಕೇರಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ಸಿಗಲು ಪ್ರಯತ್ನ:  ಮಹಾಂತೇಶ ಕವಟಗಿಮಠ

1-asdas

ದೇಶದಲ್ಲಿ ನಾಗರಿಕರಾಗಲಿ,ಭದ್ರತಾ ಸಿಬ್ಬಂದಿಗಳಾಗಲಿ ಸುರಕ್ಷಿತವಾಗಿಲ್ಲ : ರಾಹುಲ್ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aravind

ಮಹಿಳೆಯರ ಮಾಸಿಕ ಭತ್ಯೆ 1,500 ರೂ ನಿಂದ 2500 ಕ್ಕೆ : ಗೋವಾದಲ್ಲಿ ಕೇಜ್ರಿವಾಲ್

11–sdsd

ಅಮೇಥಿಯ ಅಭಿವೃದ್ಧಿ ಪ್ರಸ್ತಾಪವೇ ಇಲ್ಲ : ರಾಹುಲ್ ಗೆ ಸ್ಮೃತಿ ಟಾಂಗ್

1-asdas

ದೇಶದಲ್ಲಿ ನಾಗರಿಕರಾಗಲಿ,ಭದ್ರತಾ ಸಿಬ್ಬಂದಿಗಳಾಗಲಿ ಸುರಕ್ಷಿತವಾಗಿಲ್ಲ : ರಾಹುಲ್ ಕಿಡಿ

1-ffff

ನಾಗಾಲ್ಯಾಂಡ್‌ :’ತಪ್ಪಾದ ಗುರುತಿಸುವಿಕೆ’ಯಿಂದ ನಾಗರಿಕರ ಹತ್ಯೆ ನಡೆಯಿತೇ?

ನಾಗಾಲ್ಯಾಂಡ್‌ ನಲ್ಲಿ ನಡೆದ ನಾಗರಿಕ ಹತ್ಯೆಗಳ ಬಗ್ಗೆ ಸೇನೆ ವಿಷಾದ: ಉನ್ನತ ಮಟ್ಟದ ತನಿಖೆ

ನಾಗಾಲ್ಯಾಂಡ್‌ ನಲ್ಲಿ ನಡೆದ ನಾಗರಿಕ ಹತ್ಯೆಗಳ ಬಗ್ಗೆ ಸೇನೆ ವಿಷಾದ: ಉನ್ನತ ಮಟ್ಟದ ತನಿಖೆ

MUST WATCH

udayavani youtube

ಜೋಯಿಡಾ : ರೈತರಿಗೆ ಒಂದು ಕಡೆ ಮಳೆಯ ಸಮಸ್ಯೆಯಾದರೆ ಇನ್ನೊಂದೆಡೆ ಆನೆಗಳ ಹಾವಳಿ

udayavani youtube

ವಿಭಿನ್ನ ರೀತಿಯಲ್ಲಿ ಹೂವು ಕಟ್ಟುವ ವಿಧಾನ

udayavani youtube

ಬೆಳ್ತಂಗಡಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎದುರಾಯ್ತು 9 ಅಡಿ ಉದ್ದದ ಮೊಸಳೆ

udayavani youtube

ಇಲ್ಲಿಗೇಕೆ ಬಂದಿದ್ದೀಯ? ಸಿದ್ದರಾಮಯ್ಯ ಪ್ರಶ್ನೆಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

ಹೊಸ ಸೇರ್ಪಡೆ

17banana

ಶಾಲೆಗಳಲ್ಲಿ ಮೊಟ್ಟೆ ವಿತರಿಸದಂತೆ ಬಸವ ಧರ್ಮ ಮಠಾಧೀಶರ ಹೇಳಿಕೆಗೆ ಖಂಡನೆ

aravind

ಮಹಿಳೆಯರ ಮಾಸಿಕ ಭತ್ಯೆ 1,500 ರೂ ನಿಂದ 2500 ಕ್ಕೆ : ಗೋವಾದಲ್ಲಿ ಕೇಜ್ರಿವಾಲ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

16protest

ತ್ರಿಪುರಾ ಘಟನೆ ಖಂಡಿಸಿ ಮನವಿ

onion

ಈರುಳ್ಳಿ ಮೂಟೆ ತಿಪ್ಪೆ ಸೇರಿದೆ ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.