ದಯಾ ನಾಯಕ್‌ ನೇತೃತ್ವದ ಎಟಿಎಸ್‌ ತಂಡದಿಂದ ಮೆಫೆಡ್ರೋನ್‌ ಕಾರ್ಖಾನೆ ಮೇಲೆ ದಾಳಿ

4.2 ಕೋಟಿ ರೂ. ಮೌಲ್ಯದ ಎಂಡಿ ಡ್ರಗ್ಸ್‌ ಜಿಪ್ತಿ

Team Udayavani, Feb 20, 2020, 8:24 PM IST

Daya-Nayak-730

ಮುಂಬಯಿ: ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್‌) ಜುಹೂ ಘಟಕದ ಪೊಲೀಸ್‌ ಇನ್ಸ್‌ಪೆಕ್ಟರ್‌ ದಯಾ ನಾಯಕ್‌ ಅವರ ನೇತೃತ್ವದಲ್ಲಿ ಎಟಿಎಸ್‌ ತಂಡವು ಫೆ. 19ರಂದು ಪುಣೆಯಲ್ಲಿರುವ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿ ಸುಮಾರು 4.2 ಕೋಟಿ ರೂ. ಮೌಲ್ಯದ ಎಂಡಿ (ಮೆಫೆಡ್ರೋನ್‌) ಡ್ರಗ್ಸ್‌ ಅನ್ನು ಜಪ್ತಿ ಮಾಡಿದೆ.

ಕಳೆದ ವರ್ಷದ ಡಿ. 6ರಂದು ಎಟಿಎಸ್‌ನ ತಂಡವು ಎಂಡಿ ಪೌಡರ್‌ನ ಅಕ್ರಮ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮಹೇಂದ್ರ ಪರಶುರಾಮ್‌ ಪಾಟೀಲ್‌ (49) ಮತ್ತು ಸಂತೋಷ್‌ ಬಾಳಾಸಾಹೇಬ್‌ ಅಡ್ಕೆ (29) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂಬಯಿಯ ವಿಲೇಪಾರ್ಲೆ ಮತ್ತು ಪುಣೆಯ ಸಾಸ್ವಾಡ್‌ನಿಂದ 5.70 ಕೋಟಿ ರೂ. ಮೌಲ್ಯದ 14.300 ಕೆ.ಜಿ. ಮೆಫೆಡ್ರೋನ್‌ ಪೌಡರ್‌ ಅನ್ನು ಜಪ್ತಿ ಮಾಡಿತ್ತು. ಇದಾದ ಅನಂತರ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಪ್ರಸ್ತುತ ಇಬ್ಬರೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಪ್ರಕರಣದ ಹೆಚ್ಚುವರಿ ತನಿಖೆಯ ವೇಳೆ ಎಟಿಎಸ್‌ ಜಹೂ ಘಟಕದ ಪೊಲೀಸ್‌ ಇನ್ಸ್‌ಪೆಕ್ಟರ್‌ ದಯಾ ನಾಯಕ್‌ ಮತ್ತು ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಾಗರ್‌ ಕುಣ್ಗಿರ್‌ ಅವರು ಬಂಧಿತ ಆರೋಪಿ ಸಂತೋಷ್‌ ಬಾಳಾಸಾಹೇಬ್‌ ಅಡ್ಕೆಯ ಚಟುವಟಿಕೆಗಳ ಬಗ್ಗೆ ಆಳವಾಗಿ ತನಿಖೆ ನಡೆಸಿದಾಗ ಆತ ಪುಣೆಯ ಪುರಂದರ್‌ ತಾಲೂಕಿನ ದಿವೆಯಲ್ಲಿರುವ ಶ್ರೀ ಆಲ್ಫಾ ಕೆಮಿಕಲ್ಸ್‌ ಹೆಸರಿನ ಕಾರ್ಖಾನೆಯಲ್ಲಿ ಮೆಫೆಡ್ರೋನ್‌ ತಯಾರಿಸುತ್ತಿದ್ದ ವಿಷಯವು ಬಹಿರಂಗಗೊಂಡಿತು.

ಅನಂತರ ಎಟಿಎಸ್‌ ತಂಡವು ಫೆ. 19ರಂದು ಪುಣೆಯಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿ 4.2 ಕೋಟಿ ರೂ. ಮೌಲ್ಯದ 10.500 ಕೆ.ಜಿ. ಎಂಡಿ ಡ್ರಗ್ಸ್‌ ಮತ್ತು ಕಚ್ಚಾ ರಾಸಾಯನಿಕಗಳನ್ನು ಜಪ್ತಿ ಮಾಡಿತು. ವಶಪಡಿಸಿಕೊಳ್ಳಲಾಗಿರುವ ಕಚ್ಚಾ ರಾಸಾಯನಿಕಗಳಿಂದ 200 ಕೆ.ಜಿ. ಎಂಡಿ (80 ಕೋಟಿ ರೂ.) ತಯಾರಿಸಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. ಸುಮಾರು 1.2 ಕೋಟಿ ರೂ. ಮೌಲ್ಯದ ಎಂಡಿ ತಯಾರಿಕಾ ಘಟಕವನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ಎಟಿಎಸ್‌ ಅಧಿಕಾರಿಗಳು ಹೇಳಿದ್ದಾರೆ.

ಎಟಿಎಸ್‌ನ ಮುಖ್ಯ ಎಡಿಜಿಪಿ ದೇವನ್‌ ಭಾರ್ತಿ, ಐಜಿಪಿ ಜಯಂತ್‌ ನಾಯ್ಕ ನವಾರೆ, ಡಿಸಿಪಿ ವಿಕ್ರಂ ದೇಶಮಾಣೆ, ಡಾ| ವಿನಾಯಕ್‌ ರಾಥೋಡ್‌ ಮತ್ತು ಎಸಿಪಿ ಶ್ರೀಪಾದ್‌ ಕಾಳೆ ಅವರ ಮಾರ್ಗದರ್ಶನದ ಅಡಿಯಲ್ಲಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ಟಾಪ್ ನ್ಯೂಸ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

varun gandhi

ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ : ವರುಣ್ ಗಾಂಧಿ ಟ್ವೀಟ್ ಸ್ಫೋಟ

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

mohammed nalapad

‘ಯೂತ್ ಗಲಾಟೆ’: ರಕ್ಷಾ ರಾಮಯ್ಯ ಬೆಂಬಲಿಗನ ಮೇಲೆ ನಲಪಾಡ್ ಹಲ್ಲೆ ಆರೋಪ!

2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ: ಶೇ.72ರಷ್ಟು ಮಂದಿ ಒಲವು: ಸಮೀಕ್ಷೆ

2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ: ಶೇ.72ರಷ್ಟು ಮಂದಿ ಒಲವು: ಸಮೀಕ್ಷೆ

ajay

ಸರ್ಕಾರದ ನಡೆಗೆ ಶಾಸಕ ಅಜಯ್ ಸಿಂಗ್ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

varun gandhi

ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ : ವರುಣ್ ಗಾಂಧಿ ಟ್ವೀಟ್ ಸ್ಫೋಟ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

1-ff

ಯುಪಿ: ಜನರ ಆಕ್ರೋಶಕ್ಕೆ ಬೆದರಿ ಪ್ರಚಾರದಿಂದ ಪಾಪಾಸ್ ತೆರಳಿದ ಬಿಜೆಪಿ ಶಾಸಕ

2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ: ಶೇ.72ರಷ್ಟು ಮಂದಿ ಒಲವು: ಸಮೀಕ್ಷೆ

2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ: ಶೇ.72ರಷ್ಟು ಮಂದಿ ಒಲವು: ಸಮೀಕ್ಷೆ

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯಿಂದ ಯುವಕನ ಅಪಹರಣ;ದುರ್ದೈವದ ನಡೆ ಎಂದ ಕಾಂಗ್ರೆಸ್

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯಿಂದ ಯುವಕನ ಅಪಹರಣ;ದುರ್ದೈವದ ನಡೆ ಎಂದ ಕಾಂಗ್ರೆಸ್

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

11karnataka

ಕ್ಷಯರೋಗ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ

varun gandhi

ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ : ವರುಣ್ ಗಾಂಧಿ ಟ್ವೀಟ್ ಸ್ಫೋಟ

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.