ಕಾಲೇಜಿನ ಮಧ್ಯಾಹ್ನದ ಬಿಸಿಯೂಟದಲ್ಲಿ ಇಲಿ ಪತ್ತೆ

Team Udayavani, Dec 4, 2019, 12:08 AM IST

ಮುಜಾಫ‌ರ್‌ನಗರ್‌: ಉತ್ತರಪ್ರದೇಶದ ಮುಸ್ತಫಾಬಾದ್‌ ಪಂಚೇಂದ ಗ್ರಾಮದ ಜನತಾ ಇಂಟರ್‌ ಕಾಲೇಜಿನಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ವಿದ್ಯಾರ್ಥಿಯ ತಟ್ಟೆಯಲ್ಲಿ ಬಡಿಸಿದ ಊಟದಲ್ಲಿ ಇಲಿ ಕೂಡ ಬಿದ್ದಿತ್ತು. ಆಹಾರ ಸೇವಿಸಿದ್ದ 8 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕ ಅಸ್ವಸ್ಥಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಕಲ್ಯಾಣ್‌ ಸಮಿತಿ ಎಂಬ ಎನ್‌ಜಿಒ ಈ ಶಾಲೆಗೆ ಮಧ್ಯಾಹ್ನದ ಊಟ ಒದಗಿಸುತ್ತದೆ. ಸಂಸ್ಥೆ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ