Udayavni Special

ಆರೆಸ್ಸೆಸ್‌ ಕರೆಗೆ ರಾಹುಲ್‌ ನಕಾರ?


Team Udayavani, Aug 31, 2018, 6:00 AM IST

43.jpg

ನವದೆಹಲಿ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗೆಗಿನ ಆಹ್ವಾನವನ್ನು ತಿರಸ್ಕರಿಸುವಂತೆ ಕಾಂಗ್ರೆಸ್‌ ಕೋರ್‌ ಕಮಿಟಿ  ಅಧ್ಯಕ್ಷ ರಾಹುಲ್‌ ಗಾಂಧಿಗೆ ಸಲಹೆ ಮಾಡಿದೆ. ನವದೆಹಲಿಯಲ್ಲಿ ಗುರುವಾರ ಸಭೆ ಸೇರಿದ್ದ ಕಮಿಟಿಯ ಸಭೆಯಲ್ಲಿ ಆರ್‌ಎಸ್‌ಎಸ್‌ ಆಹ್ವಾನ, ರಫೇಲ್‌ ಡೀಲ್‌, ನೋಟುಗಳ ಅಪಮೌಲ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿತು. ಕಮಿಟಿ ಸೂಚನೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಸೆಪ್ಟೆಂಬರ್‌ 17ರಿಂದ 19 ವರೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ “ಆರ್‌ಎಸ್‌ಎಸ್‌ ದೃಷ್ಟಿಕೋನದಲ್ಲಿ ಮುಂದಿನ ಭಾರತ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಲ್ಲಿಕೆಯಾಗಲಿರುವ ಆಹ್ವಾನವನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದೆ. ಆಹ್ವಾನ ತಿರಸ್ಕರಿಸುವಂತೆ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷರು ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಈ ಹಿಂದೆ ಸೋನಿಯಾ ಗಾಂಧಿಯವರಿಗೂ ಇದೇ ಮಾದರಿ ಆಹ್ವಾನ ಸಲ್ಲಿಕೆಯಾಗಿದ್ದರೂ, ಅವರು ಅದನ್ನು ಸ್ವೀಕರಿಸಿರಲಿಲ್ಲ.

ಜೆಪಿಸಿ ಬೇಕು: ಇದೇ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ 520 ಕೋಟಿ ರೂ. ಮೌಲ್ಯದ ವಿಮಾನವನ್ನು 1,200 ಕೋಟಿ ರೂ.ನೀಡಿ ಖರೀದಿ ಮಾಡಿದ್ದೇಕೆ ಎಂದು ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ. 

ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.  ಅರುಣ್‌ ಜೇಟ್ಲಿಯವರು ಬ್ಲಾಗ್‌ ಬರೆಯುದು ಬಿಟ್ಟು ರಫೇಲ್‌ ಡೀಲ್‌ ಬಗ್ಗೆ ಜೆಪಿಸಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ. ನೋಟು ಅಪಮೌಲ್ಯ ಎನ್ನುವುದು ಬಲುದೊಡ್ಡ ಹಗರಣ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್‌ ಜೇಟ್ಲಿ ಉತ್ತರ ಕೊಡಬೇಕಾಗಿದೆ ಎಂದಿದ್ದಾರೆ. ಜನರಿಂದ ಪಡೆದ ನೋಟುಗಳನ್ನು ಉದ್ಯಮಪತಿಗಳಿಗೆ ನೀಡಲಾಗಿದೆ ಎಂದು ದೂರಿದ್ದಾರೆ.  ಪ್ರಧಾನಿ ಕ್ಷಮೆ ಯಾಚನೆಗೆ ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ “ನೀವು ತಪ್ಪು ಮಾಡಿದರೆ ಕ್ಷಮೆ ಯಾಚನೆ ಮಾಡುತ್ತೀರಿ. ಪ್ರಧಾನಿ ಮೋದಿಯವರು ಅಪಮೌಲ್ಯವನ್ನು ಉದ್ದೇಶಪೂರ್ವಕವಾಗಿಯೇ ಅದನ್ನು ಮಾಡಿದ್ದಾರೆ’ ಎಂದರು ರಾಹುಲ್‌ ಗಾಂಧಿ.

ಹೆಚ್ಚು ತೆರಿಗೆ ಸಂಗ್ರಹ, ಬೆಳವಣಿಗೆ: ಜೇಟ್ಲಿ
ನೋಟುಗಳ ಅಪಮೌಲ್ಯದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮತ್ತು ಉತ್ತಮ ರೀತಿಯಲ್ಲಿ ಆರ್ಥಿಕ ಕ್ಷೇತ್ರದ ಅಭಿವೃದ್ಧಿಯಾಗಿದೆ. ಹೀಗೆಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಲೇಖನ ಬರೆದಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಹೆಚ್ಚು ಕ್ರಮಬದ್ಧವಾಗಿ ಈಗ ಮಾರ್ಪಾಡಾಗಿದೆ. ಭಾರತವನ್ನು ತೆರಿಗೆ ಪಾವತಿ ಮಾಡದೇ ಇರುವ ರಾಷ್ಟ್ರದ ಬದಲಾಗಿ ತೆರಿಗೆ ಪಾವತಿ ಮಾಡುವ ರಾಷ್ಟ್ರವಾಗಿ ಮಾರ್ಪಾಡು ಮಾಡುವಲ್ಲಿ ಅಪಮೌಲ್ಯ ಕ್ರಮ ಯಶಸ್ವಿಯಾಗಿದೆ. ಹೆಚ್ಚಿನ ಪ್ರಮಾಣದ ವೆಚ್ಚ, ಅಭಿವೃದ್ಧಿ ದಾಖಲಾಗಿದೆ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ನೋಟುಗಳ ಅಪಮೌಲ್ಯವೇ ಒಟ್ಟು ಪ್ರಕ್ರಿಯೆಯ ಯಶಸ್ವಿಯೇ ಎಂದರೆ ಅಲ್ಲ ಎಂದು ಹೇಳಿಕೊಂಡಿದ್ದಾರೆ. 

ಯು.ಕೆ.ಹಿಂದಿಕ್ಕಲಿದೆ: ಸದ್ಯ ಭಾರತದ ವಿಶ್ವದ ಆರನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ಮುಂದಿನ ವರ್ಷ ಅದು ಐದನೇ ಸ್ಥಾನದಲ್ಲಿರುವ ಯುನೈಟೆಡ್‌ ಕಿಂಗ್‌ಡಮ್‌ ಅನ್ನು ಹಿಂದಿಕ್ಕಿ, ಅಲ್ಲಿಗೆ ಭಾರತ ಪ್ರವೇಶಿಸಲಿದೆ ಎಂದಿದ್ದಾರೆ. ಮುಂದಿನ 10-20ರಿಂದ ವರ್ಷಗಳಲ್ಲಿ ಜಗತ್ತಿನ ಮೂರು ಪ್ರಬಲ ಅರ್ಥ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರವಾಗಲಿದೆ ಎಂದಿದ್ದಾರೆ.
 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

Mayank-01

ರಾಹುಲ್–ಮಯಾಂಕ್ ಭರ್ಜರಿ ಬ್ಯಾಟಿಂಗ್ ಜೊತೆಯಾಟ: ರಾಯಲ್ಸ್ ಬೆವರಿಳಿಸಿದ ‘ಹುಡುಗರು’!

ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು

ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು

ಚಾಮರಾಜನಗರ ; ಕಾವಿಡ್ ಸೋಂಕಿಗೆ ಓರ್ವ ಸಾವು! 44 ಹೊಸ ಪ್ರಕರಣ

ಚಾಮರಾಜನಗರ ; ಕೋವಿಡ್ ಸೋಂಕಿಗೆ ಓರ್ವ ಸಾವು! 44 ಹೊಸ ಪ್ರಕರಣ

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ-ಯೋಗಕ್ಷೇಮ ವಿಚಾರಣೆ

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ-ಯೋಗಕ್ಷೇಮ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಡಿಜಿಪಿ ಪದವಿಗೆ ರಾಜೀನಾಮೆ ನೀಡಿದ್ದ ಗುಪ್ತೇಶ್ವರ್ ಪಾಂಡೆ ಇಂದು ಸಂಜೆ ಜೆಡಿಯು ಸೇರ್ಪಡೆ

ಡಿಜಿಪಿ ಪದವಿಗೆ ರಾಜೀನಾಮೆ ನೀಡಿದ್ದ ಗುಪ್ತೇಶ್ವರ್ ಪಾಂಡೆ ಇಂದು ಸಂಜೆ ಜೆಡಿಯು ಸೇರ್ಪಡೆ

ಕೆಲಸ ಕೊಡಿಸುವ ನೆಪ: ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಅತ್ಯಾಚಾರ

ಕೆಲಸ ಕೊಡಿಸುವ ನೆಪ: ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಅತ್ಯಾಚಾರ

ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್‌ಗೆ ಮಾರಿದ ಪೊಲೀಸರು!

ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್‌ಗೆ ಮಾರಿದ ಪೊಲೀಸರು!

ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ವಿಧಿವಶ

ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ವಿಧಿವಶ

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

edition-tdy-1

ಸೂಕ್ತ ಮುನ್ನೆಚ್ಚರಿಕೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ರೇಬಿಸ್‌ ಕಾಯಿಲೆ ತಡೆಗೆ ನಿರ್ಣಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.