ದೇಶದಲ್ಲಿ ಸಕ್ಕರೆ ಉತ್ಪಾದನೆ ಇಳಿಕೆ; ಜಗತ್ತಿಗೂ ಇದರ ಪರಿಣಾಮ
2019-20ರಲ್ಲಿ 2.69 ಕೋಟಿ ಟನ್ಗಳಿಗೆ ಇಳಿಕೆ ಸಾಧ್ಯತೆ
Team Udayavani, Nov 1, 2019, 6:05 PM IST
ಹೊಸದಿಲ್ಲಿ: ದೇಶದಲ್ಲಿ ಸಕ್ಕರೆ ಉತ್ಪಾದನೆ 2019-20ರ ಅವಧಿಯಲ್ಲಿ 2.69 ಕೋಟಿ ಟನ್ಗಳಿಗೆ ಇಳಿಕೆ ಕಾಣಲಿದ್ದು, ಇದು ಆಗಸ್ಟ್ನಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ 1.3 ಕೋಟಿ ಟನ್ನಷ್ಟು ಕಡಿಮೆ ಎಂದು ಸಕ್ಕರೆ ಉತ್ಪಾದನೆ ಕುರಿತ ವಿಶ್ಲೇಷಣ ಸಂಸ್ಥೆ ಇಂಟೆಲ್ಎಫ್ ಸಿ ಸ್ಟೋನ್ ಹೇಳಿದೆ.
ಭಾರತದಲ್ಲಿ ಸಕ್ಕರೆ ಉತ್ಪಾದನೆ ಕುಸಿತದ ಪರಿಣಾಮ ಅದು ಜಗತ್ತಿನ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರಲಿದೆ. 2020ರ ವೇಳೆಗೆ ಜಗತ್ತಿನ ಮಾರುಕಟ್ಟೆ 77 ಲಕ್ಷ ಟನ್ ಸಕ್ಕರೆ ಪೂರೈಕೆ ಕಡಿಮೆಯಾಗಲಿದೆ ಎಂದು ಹೇಳಿದೆ.
ಈ ಮೊದಲು ಸಕ್ಕರೆ ಉತ್ಪಾದನೆಯಲ್ಲಿ 59 ಲಕ್ಷ ಟನ್ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಜತೆಗೆ ಅದು ಐರೋಪ್ಯ ಒಕ್ಕೂಟದ ಮೇಲಿನ ನಿರೀಕ್ಷೆಯನ್ನೂ 1.65 ಕೋಟಿಗಳಿಂದ 2 ಲಕ್ಷ ಟನ್ನಷ್ಟು ಕಡಿಮೆ ಉತ್ಪಾದನೆಯಾಗಲಿದೆ ಎಂದು ಹೇಳಿದೆ.
ಕಬ್ಬು ಬೆಳೆಗೆ ಪೂರಕವಾದ ವಾತಾವರಣ ಇಲ್ಲದಿರುವುದು, ಬೆಳೆ ಕುಸಿತ, ಈ ಬಾರಿ ಭಾರೀ ಮಳೆ ಸುರಿದಿರುವುದು ಇತ್ಯಾದಿ ಕಾರಣಗಳನ್ನು ಅದು ಉಲ್ಲೇಖೀಸಿದೆ. ಸದ್ಯ ಥೈಲೆಂಡ್ನಲ್ಲಿ ದೊಡ್ಡ ಪ್ರಮಾಣದ ಸಕ್ಕರೆ ದಾಸ್ತಾನು ಇದೆ. ವಾರ್ಷಿಕ ಅದು 10 ಲಕ್ಷ ಟನ್ ರಫ್ತು ಮಾಡುವ ನಿರೀಕ್ಷೆ ಇದೆ ಎಂದು ಇಂಟೆಲ್ಎಫ್ಸಿ ಸ್ಟೋನ್ ಹೇಳಿದೆ. ಭಾರತದಲ್ಲಿ ಜಲಾಶಯಗಳು ತುಂಬಿವೆ. ಆದರೆ ಬೆಳೆಗೆ ಪೂರಕವಾದ ಹವಾಮಾನ ಇಲ್ಲವಾಗಿದೆ. ಇದು ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ