ದೇಶದಲ್ಲಿ ತಲಾ ನೀರು ಲಭ್ಯತೆ ಕುಸಿತ

Team Udayavani, Jul 16, 2019, 5:39 AM IST

ಹೊಸದಿಲ್ಲಿ: ದೇಶದಲ್ಲಿ ತಲಾ ನೀರು ಲಭ್ಯತೆಯು 2001ರಲ್ಲಿ 1816 ಕ್ಯೂಬಿಕ್‌ ಮೀಟರಿನಿಂದ 2011ರಲ್ಲಿ 1544 ಕ್ಯೂಬಿಕ್‌ ಮೀಟರಿಗೆ ಕುಸಿದಿದೆ ಎಂದು ರಾಜ್ಯಸಭೆಗೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ತಿಳಿಸಿದ್ದಾರೆ. ದೇಶದಲ್ಲಿ ನೀರಿನ ಕೊರತೆ ನಿವಾರಿಸಲು ಮಳೆ ನೀರನ್ನು ಸಂಗ್ರಹಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ನೀರು ಸಂರಕ್ಷಣೆಯನ್ನು ಒಂದು ಚಳವಳಿಯನ್ನಾಗಿ ಮಾಡಬೇಕು. ಹಲವು ದೇಶಗಳಲ್ಲಿ ಚರಂಡಿ ನೀರನ್ನೇ ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಲಾಗಿದೆ. ಆದರೆ ಭಾರತಕ್ಕೆ ಆ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ. ನೀರನ್ನು ನಿರ್ವಹಿಸುವುದು ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿದೆ. ಯೋಜನೆ, ನಿರ್ವಹಣೆ ಹಾಗೂ ಜಾರಿಯೆಲ್ಲವೂ ರಾಜ್ಯಕ್ಕೆ ಒಳಪಡುತ್ತವೆ. ಕೇಂದ್ರ ಸರಕಾರವು ಕೇವಲ ತಾಂತ್ರಿಕ, ಹಣಕಾಸು ನೆರವನ್ನು ಈ ಯೋಜನೆ ಗಳಿಗೆ ನೀಡುತ್ತದೆ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ