ಬ್ರಹ್ಮೋಸ್ ಸೇರಿ 3 ಸಾವಿರ ಕೋಟಿ ರೂ. ಯುದ್ಧೋಪಕರಣ ಖರೀದಿಗೆ ಅಸ್ತು
Team Udayavani, Dec 1, 2018, 6:42 PM IST
ನವದೆಹಲಿ: ಬ್ರಹ್ಮೋಸ್ ಕ್ಷಿಪಣಿ, ಯುದ್ಧ ಟ್ಯಾಂಕ್ ಅರ್ಜುನ್ ಸೇರಿದಂತೆ ಸುಮಾರು 3000 ಕೋಟಿ ರೂಪಾಯಿ ಮೊತ್ತದ ಸೇನಾ ಯುದ್ಧೋಪಕರಣ ಖರೀದಿಸಲು ರಕ್ಷಣಾ ಖರೀದಿ ಸಮಿತಿ(ಡಿಎಸಿ) ಶನಿವಾರ ಗ್ರೀನ್ ಸಿಗ್ನಲ್ ನೀಡಿರುವುದಾಗಿ ವರದಿ ತಿಳಿಸಿದೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯುದ್ಧೋಪಕರಣ ಖರೀದಿ ಪ್ರಕ್ರಿಯೆಗೆ ಅನುಮೋದನೆ ನೀಡಿದೆ.
ಭಾರತ ಒಂದು ಶತಕೋಟಿ ವೆಚ್ಚದಲ್ಲಿ ಎರಡು ಅತ್ಯಾಧುನಿಕ ಯುದ್ಧ ನೌಕೆಗಳನ್ನು ಖರೀದಿಸುತ್ತಿದ್ದು, ಇದರಲ್ಲಿ ದೇಶೀಯವಾಗಿ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
ದೇಶಿಯವಾಗಿ ನಿರ್ಮಿಸಿರುವ ಬ್ರಹ್ಮೋಸ್ ಸರಣಿ ಕ್ಷಿಪಣಿಗಳನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಅಲ್ಲದೇ ಈ ಸೂಪರ್ ಸಾನಿಕ್ ಮಿಸೈಲ್ ಯುದ್ಧ ನೌಕೆಯಲ್ಲಿ ಅಳವಡಿಸಲು ಸಮರ್ಥವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು