5,100 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್‌ ಖರೀದಿಗೆ ಒಪ್ಪಿಗೆ

Team Udayavani, Jan 21, 2020, 9:33 PM IST

ನವದೆಹಲಿ: ಸೇನೆಗೆ ಅಗತ್ಯವಾಗಿರುವ ಮಿಲಿಟರಿ ಹಾರ್ಡ್‌ವೇರ್‌ ಮತ್ತು ಇತರ ಸಲಕರಣೆ ಖರೀದಿಗೆ 5,100 ಕೋಟಿ ರೂ. ಪ್ರಸ್ತಾವನೆಯನ್ನು ರಕ್ಷಣಾ ಖರೀದಿ ಸಮಿತಿ (ಡಿಎಸಿ) ಮಂಗಳವಾರ ಅನುಮೋದಿಸಿದೆ. ದೇಶಿಯವಾದ ಮೂಲಗಳಿಂದಲೇ ಅದನ್ನು ಖರೀದಿಸಲು ಸಮ್ಮತಿ ಸೂಚಿಸಿದ್ದು ಮಹತ್ವದ ಅಂಶ. ಇದರ ಜತೆಗೆ ಭಾರತದ ನೌಕಾಪಡೆಗೆ ಅಗತ್ಯವಾಗಿರುವ ಸಬ್‌ಮರೀನ್‌ ನಿರ್ಮಾಣಕ್ಕೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮ್ಮತಿಸಲಾಗಿದೆ. ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಗೆ ಜ.ಬಿಪಿನ್‌ ರಾವತ್‌ ಅವರ ನೇಮಕ ನಡೆದ ಬಳಿಕದ ಮೊದಲ ಸಭೆ ಇದಾಗಿದೆ.

ಮತ್ತೂಂದು ಮಹತ್ವದ ನಿರ್ಧಾರದಲ್ಲಿ ಭಾರತದ ವ್ಯೂಹಾತ್ಮಕ ಪಾಲುದಾರರು ಮತ್ತು ಸಂಭಾವ್ಯ ಮೂಲ ಉತ್ಪನ್ನಗಳ ಉತ್ಪಾದಕರನ್ನು ನಿಗದಿ ಮಾಡುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ. ನೌಕಾಪಡೆಗೆ ಅಗತ್ಯವಾಗಿರುವ ಆರು ಸಬ್‌ಮರೀನ್‌ಗಳ ನಿರ್ಮಾಣಕ್ಕೆ ಈ ನಿರ್ಧಾರ ಅನುಕೂಲವಾಗಿ ಪರಿಣಮಿಸಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ