ಕಾಳಿ ಪೋಸ್ಟರ್ ವಿವಾದ: ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಕೋರ್ಟ್ ಸಮನ್ಸ್
Team Udayavani, Jul 11, 2022, 7:40 PM IST
ನವದೆಹಲಿ: ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸಿದ್ದಕ್ಕಾಗಿ ನಿರ್ಮಾಪಕಿ ಲೀನಾ ಮಣಿಮೇಕಲೈ ಮತ್ತು ಇತರರಿಗೆ ದೆಹಲಿ ನ್ಯಾಯಾಲಯವು ಸಮನ್ಸ್ ನೀಡಿದೆ. ಆಗಸ್ಟ್ 6 ರಂದು ಮುಂದಿನ ವಿಚಾರಣೆಗೆ ನ್ಯಾಯಾಲಯವು ಪ್ರಕರಣವನ್ನು ಪಟ್ಟಿ ಮಾಡಿದೆ.
ಚಲನಚಿತ್ರ ನಿರ್ಮಾಪಕಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿ ಚಿತ್ರಣವು ನೈತಿಕತೆ ಮತ್ತು ಸಭ್ಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ದೂರು ನೀಡಲಾಗಿತ್ತು.
ಈ ತಿಂಗಳ ಆರಂಭದಲ್ಲಿ, ಮಣಿಮೇಕಲೈ ತನ್ನ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಕಾಳಿ ದೇವಿಯ ವೇಷ ಧರಿಸಿದ ಮಹಿಳೆ ಸಿಗರೇಟ್ ಸೇದುವುದು, ತ್ರಿಶೂಲ ಮತ್ತು ಕುಡಗೋಲು ಹಿಡಿದು, ದೇವಿಯ ಪಾತ್ರವನ್ನು ನಿರ್ವಹಿಸುತ್ತಿರುವ ನಟನು ತೃತೀಯ ಲಿಂಗಿ ಸಮುದಾಯದ ಧ್ವಜವನ್ನು ಹಿಡಿದಿರುವಂತೆ ತೋರಿಸಲಾಗಿತ್ತು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.